ಸ್ವಗ್ರಾಮ ಬಿರಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಎಸ್.ಎ.ಪಾಟೀಲ್ ಅಂತ್ಯಕ್ರಿಯೆ | ಅಂತಿಮ ನಮನ ಸಲ್ಲಿಸಿ ಅಸಂಖ್ಯಾತ ಜನ
ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಸುಪ್ರಸಿದ್ಧ ವರಲಕ್ಷಿö್ಮ ಬಿಟಿ ಹತ್ತಿ ತಳಿ ಸಂಶೋಧಕ, ರೈತರ ಸ್ನೇಹಿ ಕೃಷಿ ವಿe್ಞÁನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕೃಷಿ ಸಂತ ಡಾ.ಎಸ್.ಪಾಟೀಲ್ (೮೦) ಅವರು ಬುಧವಾರ ಪಂಚಭೂತಗಳಲ್ಲಿ ಲೀನವಾದರು. ಮಣ್ಣಿನ ಮಗ ಮಣ್ಣಲ್ಲಿ ಮಣ್ಣಾದ, ಎಸ್.ಎಸ್.ಪಾಟೀಲ್ ಅಮರ್ ಹೈ ಎಂದು ರೈತರು ಘೋಷಣೆ ಕೂಗಿದರು.
ಸೋಮವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದರು. ಕಲಬುರಗಿಯ ಭಗವತಿ ನಗರದ ನಿವಾಸಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಆಳಂದ ರಸ್ತೆಯ ಕೃಷಿ ಸಂಶೋಧನಾ ಕೇಂದ್ರ(ಕೆವಿಕೆ)ಕ್ಕೆ ಕೊಂಡೊಯ್ದ ಸಿಬ್ಬಂದಿ, ಕೃಷಿ ಕಾಲೇಜಿನ ವಿದ್ಯಾರ್ಥಿಗಳು, ರೈತರು ಅಂತಿಮ ದರ್ಶನ ಪಡೆದರು. ಸ್ವಗ್ರಾಮಕ್ಕೆ ಸಾಗಿಸುವಾಗ ಜನರು ಕೃಷಿ ಸಂತನ ದರ್ಶನ ಪಡೆದುಕೊಂಡರು. ಮಾರ್ಗ ಮಧ್ಯದ ಫರಹತಾಬಾದ್, ರz್ದೆÃವಾಡಗಿ ಕೃಷಿ ಸಂಶೋಧನಾ ಕೇಂದ್ರ, ಜೇವರ್ಗಿ, ಕೆಲ್ಲೂರ, ಆಂದೋಲಾಗಳಲ್ಲಿ ಪಾರ್ಥಿವ ಶರೀರಕ್ಕೆ ಜನರು ನಮನ ಸಲ್ಲಿಸಿದರು. ಮಂಗಳವಾರ ರಾತ್ರಿ ಸ್ವಗ್ರಾಮ ಬಿರಾಳಕ್ಕೆ ಪಾರ್ಥಿವ ಶರೀರ ಆಗಮಿಸಿತು.
ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅಸಂಖ್ಯಾತ ಜನರು ಡಾ.ಎಸ್.ಎ.ಪಾಟೀಲ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಿರಾಳ ಸೇರಿ ಸುತ್ತಮುತ್ತಲಿನ ಹಳ್ಳಿಜನರು ಅಂತಿಮ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ೧.೩೦ಕ್ಕೆ ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಸಿಪಿಐ ರಾಜೇಸಾಬ್ ನದಾಫ್, ಡಿಎಚ್‌ಒ ಸಿದ್ದು ಪಾಟೀಲ್, ಶಾಸಕ ಡಾ.ಅಜಯಸಿಂಗ ಧರ್ಮಸಿಂಗ್ ಅವರು ತಾಲೂಕು ಆಡಳಿತದಿಂದ ಗೌರವ ಸಲ್ಲಿಸಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಗಣ್ಯರು
ಎಸ್.ಎ.ಪಾಟೀಲ್‌ರ ಅಂತ್ಯಕ್ರಿಯೆಯಲ್ಲಿ ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಜೇರಟಗಿಯ ಶ್ರೀ ಮಹಾಂತ ಸ್ವಾಮೀಜಿ, ಕಡಕೋಳಕದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಶ್ರೀ ಗುರುಬಸವ ಸ್ವಾಮೀಜಿ, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ, ವಿಲಾಸವತಿ ಖೂಬಾ, ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್, ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ,ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸಮದ್ ಪಟೇಲ್, ರತೀಂದ್ರನಾಥ ಸುಗೂರು, ಪ್ರಮುಖರಾದ ಬಸವರಾಜ ಭೀಮಳ್ಳಿ, ಭೀಮಾಶಂಕರ ಬಿಲಗುಂದಿ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ನೀಲಕಂಠ ಮೂಲಗೆ, ರವಿ ಬಿರಾದಾರ, ಸಿದ್ದು ಸಾಹು ಅಂಗಡಿ, ಗುರುಲಿಂಗಪ್ಪಗೌಡ ಆಂದೋಲಾ, ಗೌಡಪ್ಪಗೌಡ ಆಂದೋಲಾ, ವಿಜಯಕುಮಾರ ಹಿರೇಮಠ,ಸಿದ್ದಲಿಂಗರಡ್ಡಿ ಇಟಗಿ, ಬಸವರಾಜ ಮಾಲಿಪಾಟೀಲ್, ರಾಜಶೇಖರ ವಾರದ, ಮಹಾಂತಯ್ಯ ಹಿರೇಮಠ, ಬಸವರಾಜ ಸಾಸಾಬಾಳ, ಸಂಗನಗೌಡ ಗುಳ್ಯಾಳ, ಸಿದ್ದಣ್ಣ ಹೂಗಾರ, ಬಸವರಾಜ ಪಾಟೀಲ್, ವಿಜಯಲಕ್ಷ್ಮೀ ಆಂದೋಲಾ, ಮಲಿಕಾರ್ಜುನ ಹಲಕರ್ಟಿ,ಅರುಣರಡ್ಡಿ ಶಿವಪುರ, ಸಂಗನಗೌಡ ರz್ದÉÃವಾಡಗಿ, ಎ.ಬಿ.ದೇಸಾಯಿ ಹಂಗರಗಿ, ಪರಮೇಶ್ವರ ಬಿರಾಳ ಇತರರಿದ್ದರು.