ಜಿಲ್ಲೆ

ಗ್ರಾಪಂ ಸದಸ್ಯರನ್ನೇ ಮುಂದುವರಿಸಿ

Belagavi

ಬೈಲಹೊಂಗಲ: ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದಿದ್ದು ಅವರನ್ನೇ ಮುಂದುವರಿಸಬೇಕು. ಸರ್ಕಾರ ಸಲಹಾ ಸಮಿತಿ
ನೇಮಿಸಲು ಹೊರಟಿರುವುದನ್ನು ಕೈಬಿಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶನಿವಾರ ಪಟ್ಟಣದ ಎಸಿ ಕಚೇರಿ ಎದುರು ಪ್ರತಿಭಟಿಸಿದರು.

ನೇತೃತ್ವ ವಹಿಸಿದ್ದ ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿ, ಕೋವಿಡ್ -19ನಿಂದಾಗಿ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಸೋಂಕು ತಡೆಗಟ್ಟಲು ಶ್ರಮಿಸುತ್ತಿರುವ ಗ್ರಾಪಂ ಸದಸ್ಯರನ್ನೇ ಮುಂದುವರಿಸಬೇಕು. ಬಿಜೆಪಿ ಕಾರ್ಯಕರ್ತರನ್ನು ಸಲಹಾ ಸಮಿತಿಗೆ ನೇಮಿಸುತ್ತಿರುವುದು ಸರಿಯಲ್ಲ. ಈ ಕ್ರಮಕ್ಕೆ ಮುಂದಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿ, ನಿಗದಿತ ಸಮಯದಲ್ಲಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ ಮೂಲಕ ಮುಖ್ಯಮಂತ್ರಿಗಳು, ಚುನಾವಣಾಧಿಕಾರಿ, ರಾಜ್ಯಪಾಲರಿಗೆ, ಪಂಚಾಯತ್ ರಾಜ್ಯ ಸಚಿವರಿಗೆ ಮನವಿ ಸಲ್ಲಿಸಿದರು.

ನ್ಯಾಯವಾದಿ ಮಡಿವಾಳಪ್ಪ ಕುರಿ, ನಿಂಗಪ್ಪ ಕುರಿ, ಶ್ರೀಶೈಲ ಕಣಗಾವಿ, ಪ್ರೇಮಾ ಮಾದರ, ಯಲ್ಲಪ್ಪ ಮಟಗುಪ್ಪಿ, ಲಕ್ಷ್ಮೀ ಕಾಳೆ, ಗೀತಾ ಹುಗ್ಗಿ, ಮಂಜುಳಾ ಆನಿಕಿವಿ, ಮಹಾಂತೇಶ ನರಸಣ್ಣವರ, ಶಂಕರ ಮಂಗಳಗಟ್ಟಿ, ಯಲ್ಲಪ್ಪ ಹೊಳಿ, ಆನಂದ ವಾರದ, ಮೈಲಾರ ತುರಾಯಿ, ಸುರೇಶ ಬಿಜ್ಜಣ್ಣವರ ಇದ್ದರು.