ಜಿಲ್ಲೆ

ದೇವಸ್ಥಾನಗಳ ಅಭಿವೃದ್ಧಿಗೂ ಅನುದಾನ

ಪ್ರಶಾಂತ ಹೂಗಾರ

ರಾಯಬಾಗ: ಕ್ಷೇತ್ರದ ಎಲ್ಲ ಗ್ರಾಮಗಳಿಗೆ ರಸ್ತೆ, ನೀರು, ಚರಂಡಿ, ಬಿದಿದೀಪ, ಆಸ್ಪತ್ರೆಗಳಂತಹ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 2.50 ಕೋಟಿ ರೂ. ಅನುದಾನದಲ್ಲಿ ಕಂಕಣವಾಡಿ-ರಾಯಬಾಗ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಜಿಪಂ, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ 20 ಲಕ್ಷ ರೂ.ಅನುದಾನದಲ್ಲಿ ಗೋಣಿಬಸವೇಶ್ವರ ಮತ್ತು ಚಂದ್ರವ್ವತಾಯಿ ದೇವಸ್ಥಾನಗಳ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರ ಎಲ್ಲ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಮತ್ತು ಎಲ್ಲ ಸಮುದಾಯದವರ ದೇವಸ್ಥಾನಗಳ ಅಭಿವದ್ಧಿಗಾಗಿ ಅನುದಾನ ನೀಡುವುದಾಗಿ ತಿಳಿಸಿದರು.

ಜಿಪಂ ಎಇ ಎಸ್.ಎಸ್. ಹೊಸಮನಿ, ಪ್ರಕಾಶ ಹುಕ್ಕೇರಿ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ನಟರಾಜ ಮಾವರಕರ, ಕೆ.ಬಿ. ದೇಸಾಯಿ, ಹಾಲಪ್ಪ ಪಿರಗಿಪಾಟೀಲ, ಭೀಮಪ್ಪ ನಾಯಿಕವಾಡಿ, ಮಹಾಲಿಂಗ ಮುದ್ದಾಪೂರೆ, ಪುಂಡಲೀಕ ಗಿಡ್ಡಗೋಳ, ಮಾರುತಿ ಜಂಬಗಿ, ಕಲ್ಲನಗೌಡ ಪಾಟೀಲ, ಸಿದ್ರಾಮ ಪಾಟೀಲ, ರಾಮನಾಯಕ ನಾಯಿಕ, ಅಪ್ಪಣ್ಣ ಗಡಕರಿ, ಬಸವಂತ ಅಂಬಿನಾಯಕ, ಚಂದವ್ವ ಸಂಗಯ್ಯಗೋಳ ಇತರರಿದ್ದರು.