ಜಿಲ್ಲೆ

ಎಕ್ಸ್​ಪ್ರೆಸ್ ಪೈಪ್​ಲೈನ್​ಗೆ ಗುದ್ದಲಿ ಪೂಜೆ

ಮೂಡಿಗೆರೆ: ಪಟ್ಟಣದ ಕುಡಿಯುವ ನೀರು ಪೂರೈಕೆಯ ಹೊಸ ಯೋಜನೆ ಎಕ್ಸ್​ಪ್ರೆಸ್ ಲೈನ್​ನ ಪಟ್ಟಣದ ಗಂಗನಮಕ್ಕಿಯಿಂದ ಟ್ಯಾಂಕಿಗೆ ಪೈಪ್ ಅಳವಡಿಕೆ ಕಾಮಗಾರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶುಕ್ರವಾರ ಪಟ್ಟಣದ ಗಂಗನಮಕ್ಕಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿದರು.

ಎಕ್ಸ್​ಪ್ರೆಸ್ ಲೈನ್ ನಿರ್ಮಾಣ ಕಾಮಗಾರಿಗೆ 46.16 ಲಕ್ಷ ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿ ತ್ವರಿತವಾಗಿ ಮುಗಿಸಲಾಗುವುದು ಎಂದು ಶಾಸಕ ಸುದ್ದಿಗಾರರಿಗೆ ತಿಳಿಸಿದರು.

ಕಿತ್ತಲೆಗಂಡಿಯಿಂದ ಈಗಾಗಲೇ ಒಂದು ಲೈನ್ ಮೂಲಕ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದೆ. ಅದು ಚಿಕ್ಕ ಗಾತ್ರದ ಪೈಪ್​ವುೂಲಕ ಪೂರೈಕೆಯಾಗುತ್ತಿದ್ದು, ಪಟ್ಟಣ ವಾಸಿಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದನ್ನು ಮನಗಂಡು ಕಿತ್ತಲೆಗಂಡಿಯಿಂದ ಎಕ್ಸ್​ಪ್ರೆಸ್ ಪೈಪ್ ಲೈನ್ ಮೂಲಕ ದೊಡ್ಡ ಗಾತ್ರದ ಪೈಪ್ ಲೈನ್ ಮೂಲಕ ನೀರು ಪೂರೈಕೆಗೆ ಪಪಂ ಮುಂದಾಗಿದೆ ಎಂದರು.