ತಾವರಗೇರಾ ಸಮೀಪದ ಹಂಚಿನಾಳನಲ್ಲಿ ನಡೆದ ಕಾರ್ಯಕರ್ತರ ಅಭಿನಂದನೆ ಕಾರ್ಯ ಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ಕೆ.ಮಹೇಶ , ಅಶೋಕ ಬಳೂಟಗಿ , ಮುತ್ತಣ್ಣ , ಯಂಕಪ್ಪ ರಸರಡ್ಡಿ ,ದೊಡ್ಡಪ್ಪ ಇದ್ದರು.  
ಜಿಲ್ಲೆ

ಅನುದಾನ ಬಿಡುಗಡೆ ಮಾಡದ ಸರ್ಕಾರ

Kopala - Desk - Eraveni

ತಾವರಗೇರಾ: ಚುನಾವಣೆ ವೇಳೆಯಲ್ಲಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಈ ಭಾಗದ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಸಮೀಪದ ಹಂಚಿನಾಳ ಗ್ರಾಮದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ,

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಬಿಡುಗಡೆಗೊಂಡ ನಂತರ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದರು.

ಪ್ರಮುಖರಾದ ಅಶೋಕ ಬಳೂಟಗಿ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಶರಣೇಗೌಡ ಸಾಹುಕಾರ ಹಂಚಿನಾಳ, ದೊಡ್ಡಬಸವನಗೌಡ ನವಲಹಳ್ಳಿ,

ಗ್ರಾಪಂಮಾಜಿ ಅಧ್ಯಕ್ಷ ಶ್ಯಾಮೀದ್ ಸಾಬ್ ಹಿರೇಮನ್ನಾಪೂರ, ಯಂಕಪ್ಪ ರಸರಡ್ಡಿ, ದೊಡ್ಡಪ್ಪ ಅಬ್ಬಿಗೇರಿ, ಮಹಾಂತೇಶ, ರಾಮಣ್ಣ ಹುಲಸಗೇರಿ, ಕೆಂಚಪ್ಪ, ದೊಡ್ಡಪ್ಪ ಅಬ್ಬಿಗೇರಿ, ಅಂಬಣ್ಣ, ಶರಣಪ್ಪ ಗೋದಿರೊಟ್ಟಿ, ಬಾಲಪ್ಪ, ಯಂಕಪ್ಪ ಇದ್ದರು.