ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಂಗಾವತಿ ಅಂಬೇಡ್ಕರ್ ವೃತ್ತದ ಮುಂದೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ತಾಲೂಕು ಸಮಿತಿ ಸದಸ್ಯರು ಪ್ರತಿಭಟಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಪದಾಧಿಕಾರಿಗಳಾದ ಎ.ಹುಲುಗಪ್ಪ, ದೇವಮ್ಮಹುಡೇದ್, ಸುನೀತಾ, ಪಾರ್ವತಿ, ಆಂಜನೇಯ ಇತರರಿದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆಗಾಗಿ ಮೀಸಲು ವರ್ಗದ ಅನುದಾನ ಕಡಿತ ಸಲ್ಲ

Gangavati - Mohan Kumar H R

ಗಂಗಾವತಿ: ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದ ಮುಂದೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ತಾಲೂಕು ಸಮಿತಿ ಸದಸ್ಯರು ನಗರ ಮತ್ತು ಗ್ರಾಮೀಣ ಭಾಗದ ಕಾರ್ಮಿಕರೊಂದಿಗೆ ಬುಧವಾರ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.

ತಾಲೂಕು ಸಮಿತಿ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಮೀಸಲು ವರ್ಗಕ್ಕೆ ಮೀಸಲಾದ ಅನುದಾನ ಕಡಿತಗೊಳಿಸುತ್ತಿದ್ದು, ಕಾರ್ಮಿಕರ ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸುತ್ತಿಲ್ಲ ಎಂದು ದೂರಿದರು.

ಕನಿಷ್ಟ ವೇತನ 15 ಸಾವಿರ ರೂ. ನಿಗದಿಗೊಳಿಸಬೇಕಿದ್ದು, ಕೆಲಸ ಅವಧಿ ಕಡಿತಗೊಳಿಸಬೇಕು. ಕಾರ್ಮಿಕ ವಿರೋಧಿ ಕಾಯ್ದೆ ರದ್ದುಗೊಳಿಸಬೇಕಿದ್ದು, ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಅಸಂಘಟಿತ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಎ.ಹುಲುಗಪ್ಪ, ದೇವಮ್ಮ ಹುಡೇದ್, ಸುನೀತಾ, ಪಾರ್ವತಿ, ಆಂಜನೇಯ, ಶೇಖಮ್ಮ, ಲಕ್ಷ್ಮಣ ನಾಯಕ, ಕಂಠೆಪ್ಪ ಸಿಂಗನಾಳ್, ಶಂಕ್ರಪ್ಪ ಕುರಟ್ಟಿ, ಎಂ.ಖಾಸೀಂಸಾಬ್, ನಾಗೇಶ ಭೋವಿ ಇತರರಿದ್ದರು.