ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಕುಮಾರೆಪ್ಪ ಕಮತರ್, ಆದನಗೌಡ ಸಂತೆಕೆಲ್ಲೂರು, ಲಿಂಗರಾಜ ಪಾಟೀಲ, ವೆಂಕಟರಡ್ಡಿ ಹಾಲಾಪುರ, ಶರಣಪ್ಪ ಶಾವಂತಗೇರಿ, ಅಜಯ ನಾಡಗೌಡ, ಬಸವರಾಜ, ವೆಂಕಟರಡ್ಡಿ ಹೂವಿನಬಾವಿ ಅಜಯ ನಾಡಗೌಡ ಇತರರಿದ್ದರು. 
ಜಿಲ್ಲೆ

ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೊಡಿ

ಮಸ್ಕಿ: ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡುವಂತೆ ದೇವಸ್ಥಾನ ಕಮಿಟಿಯಿಂದ ಶಾಸಕ ಆರ್‌ಬಸನಗೌಡ ತುರ್ವಿಹಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ದೇವಸ್ಥಾನಕ್ಕಾಗಿ 2.79 ಕೋಟಿ ರೂ. ವೆಚ್ಚ ತಗುಲಬಹುದೆಂದು ಅಂದಾಜು ಮಾಡಲಾಗಿದ್ದು ಈಗಾಗಲೇ ಸರ್ಕಾರ ಒಂದು ಕೋಟಿ ರೂ. ಅನುದಾನವನ್ನು ನೀಡಿದೆ. ಕಾಮಗಾರಿಯನ್ನು ಕ್ಯಾಶುಟೆಕ್ ಸಂಸ್ಥೆಗೆ ವಹಿಸಲಾಗಿದೆ.

ದೇವಸ್ಥಾನದ ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಹಣದ ಅವಶ್ಯ ಇದೆ ಎಂದು ಮನವಿ ಮಾಡಿದರು.