ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ತಾಲೂಕು ಅಂಗವಿಕಲರ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ವೆಂಕೋಬ ನಾಯಕ, ಕಾರ್ಯದರ್ಶಿ ಚಂದ್ರು ಚಿಂಚೋಡಿ, ಖಜಾಂಚಿ ಹನುಮಂತಿ ಕರ್ಕಿಹಳ್ಳಿ, ಲೋಕಪ್ಪ ಜಾಧವ್, ರಂಗಪ್ಪ ಗೋಪಳಾಪುರ, ರಂಗಪ್ಪ ಇರಬಗೇರಾ, ವಿರೂಪಾಕ್ಷಿ, ತಿಮ್ಮಣ್ಣ ಹೆಮನಾಳ, ಡಾಕೋಜಿ, ಹನುಮಂತ ಬುಂಕಲದೊಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇತರಿದ್ದರು. 
ಜಿಲ್ಲೆ

ರಾಯಚೂರಿಗೆ ಏಮ್ಸ್ ಮಂಜೂರು ಮಾಡಿ

Gangavati - Desk - Veeresh S Ullagaddi

ದೇವದುರ್ಗ: ಜಿಲ್ಲೆಯ ಅಭಿವೃದ್ಧಿಗಾಗಿ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ತಾಲೂಕು ಅಂಗವಿಕಲರ ಒಕ್ಕೂಟದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.


ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎನ್ನುವ ಬೇಡಿಕೆ ಹಲವು ದಿನಗಳಿಂದ ಇದೆ. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟಗಳು ನಡೆಯುತ್ತಿವೆ.

ಏಮ್ಸ್ ಹೊಂದಲು ಜಿಲ್ಲೆ ಗೆ ಎಲ್ಲ ರೀತಿಯ ಅರ್ಹತೆ ಇದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಏಮ್ಸ್ ಮಂಜೂರಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಏಮ್ಸ್ ಮಂಜೂರಾದರೆ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಯುವಕರಿಗೆ ಉದ್ಯೋಗ ಸಿಗಲಿದೆೆ.

ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿ ಹರಿಯುತ್ತಿದ್ದು, ದಿನದ 24 ಗಂಟೆ ನೀರಿನ ಲಭ್ಯತೆ ಇರುವುದರಿಂದ ವಿದ್ಯುತ್ ಸೌಲಭ್ಯ, ಸಂಸ್ಥೆಗೆ ಬೇಕಾದ ಭೂಮಿಯೂ ಲಭ್ಯವಿದೆ. ಆದ್ದರಿಂದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.