ಇಲಿಯಾಸ್ ನಗರ ಮತ್ತು ಗಂಧರ್ವ ನಗರದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ರಿಯಾಜ್ ಅಹ್ಮದ್, ಮುನೀರ್, ಸೈಯದ್ ಅನ್ವರ್ ಮುಂತಾದವರು ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.  
ಜಿಲ್ಲೆ

ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ

Shivamogga - Desk - Megha MS

ಶಿವಮೊಗ್ಗ: ಇಲಿಯಾಸ್ ನಗರ ಹಾಗೂ ಗಂಧರ್ವ ನಗರದ ಮಂದಿಗೆ ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಶುಕ್ರವಾರ ಜಿಲ್ಲಾಽಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದೆ. ಹೊಸದಾಗಿ ಅನುಮತಿ ನೀಡಲು ವೈಜ್ಞಾನಿಕವಾಗಿ ಸ್ಥಳ ಪರಿಶೀಲನೆ ನಡೆಸಿಲ್ಲ. ಹೀಗಾಗಿ ನಮ್ಮ ಭಾಗದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾಗಿಲ್ಲ ಎಂದರು.
ಶಿವಮೊಗ್ಗ ನಗರದ ಇಲಿಯಾಸ್ ನಗರ ಮತ್ತು ಗಂಧರ್ವ ನಗರದಲ್ಲಿ ೧,೫೦೦ಕ್ಕೂ ಹೆಚ್ಚು ಪಡಿತರದಾರರಿದ್ದಾರೆ. ಇದುವರೆಗೂ ಇಲ್ಲಿ ನ್ಯಾಯಬೆಲೆ ಅಂಗಡಿ ಆರಂಭಿಸಿಲ್ಲ. ಹೀಗಾಗಿ ಪಡಿತರ ಪಡೆಯಲು ಪಕ್ಕದ ವಾರ್ಡ್ಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ವಾರ್ಡ್ನಲ್ಲೇ ಅಂಗಡಿ ತೆರೆಯಬೇಕೆಂದು ಆಗ್ರಹಿಸಿದರು. ಸ್ಥಳೀಯರಾದ ರಿಯಾಜ್ ಅಹ್ಮದ್, ಸೈಯದ್ ಅನ್ವರ್, ಮುನೀರ್ ಇತರರಿದ್ದರು.