ಜಿಲ್ಲೆ

ಗ್ರಾನೈಟ್ ಅಂಗಡಿಗೆ ಬೆಂಕಿ

Davangere - Desk - Shobha Krishna Gowda

ಹರಿಹರ: ಗ್ರಾನೈಟ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂದಾಜು 30 ಲಕ್ಷ ರೂ. ಹಾನಿಯಾದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಹಳೆ ಪಿ.ಬಿ. ರಸ್ತೆಯ ಎಸ್​ಜೆವಿಪಿ ಹೈಟೆಕ್ ಪಿಯು ಕಾಲೇಜು ಪಕ್ಕದ ಮಹೇಂದ್ರಕುಮಾರ್ ಜೆ. ಪಟೇಲ್ ಮಾಲೀಕತ್ವಕ್ಕೆ ಸೇರಿದ ಅಂಗಡಿಯಲ್ಲಿ ಅವಘಡ ಸಂಭವಿಸಿದ್ದು ಯಾವುದೇ ಜೀವಹಾನಿಯಾಗಿಲ್ಲ.

ಅಗ್ನಿ ಅವಘಡದಲ್ಲಿ ಪ್ಯಾನ್, ಸಿಸಿ ಕ್ಯಾಮರಾ, ಕಂಪ್ಯೂಟರ್, ಒಂದು ಬೈಕ್ ಸೇರಿ ಇತರೆ ವಸ್ತುಗಳು ಸುಟ್ಟುಹೋಗಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ನಗರ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ತನಿಖೆ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಆರ್. ಸಂಜೀವ್​ಕುಮಾರ್, ಆಂಜನೇಯ, ಶಂಕರ್​ವುೂರ್ತಿ, ಮೆಕಾನಿಕ್ ಕುಮಾರ್, ಸಿಬ್ಬಂದಿ ಸಿರಾಜ್​ಖಾನ್ ದೇಸಾಯಿ, ಬಾಲು ಕುಮಾರ್, ಭೂಷಣ್ ಭಾಗಿಯಾಗಿದ್ದರು.