ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ಕೊಟ್ಟಿದ್ದಕ್ಕಾಗಿ ಮಾಲೀಕರಾದ ಗುರುಲಿಂಗಮ್ಮಗೆ ನ್ಯಾಯಾಧೀಶರು 16 ಸಾವಿರ ರೂ, ದಂಡ ಕಟ್ಟಿಸಿರುವ ರಶೀದಿ. 
ಜಿಲ್ಲೆ

ಬಾಲಕನಿಗೆ ಸ್ಕೂಟರ್ ಕೊಟ್ಟಿದ್ದ ಅಜ್ಜಿಗೆ 16 ಸಾವಿರ ರೂ. ದಂಡ

ಬೇಲೂರು: ಅಪ್ರಾಪ್ತನಿಗೆ ಬೈಕ್ ಕೊಟ್ಟ ಅಜ್ಜಿಗೆ ಬೇಲೂರಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 16 ಸಾವಿರ ರೂ.ದಂಡ ವಿಧಿಸಿದ್ದಾರೆ. ತಾಲೂಕಿನ ಬಿಕ್ಕೋಡು ಹೋಬಳಿಯ ನಿಡುಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಬಾಗ 2024 ರ ಆಗಸ್ಟ್ 4 ರಂದು ಬಿಕ್ಕೋಡು ಸಮೀಪದ ತಟ್ಟೇಹಳ್ಳಿ ಗ್ರಾಮದ ಗುರುಲಿಂಗಮ್ಮ ಅವರ ಮೊಮ್ಮಗ ಎದುರಿನಿಂದ ಬಂದ ಬೈಕಿಗೆ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದ.

ಈ ಸಂಬಂದ ಬಾಲಕನ ಮೇಲೆ ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜು.4 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಲ್ಮಾ ಅವರು ಬಾಲಕನಿಗೆ ಚಾಲನೆ ಮಾಡಲು ಸ್ಕೂಟರ್ ನೀಡಿದ್ದ ಸ್ಕೂಟರ್ ಮಾಲೀಕರಾದ ಬಾಲಕನ ಅಜ್ಜಿ ಗುರುಲಿಂಗಮ್ಮ ಅವರಿಗೆ 16 ಸಾವಿರ ರೂ. ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.