ಜಿಲ್ಲೆ

ಮಗ-ಮೊಮ್ಮಗನ ಜಗಳ ಬಿಡಿಸಲು ಹೋದ ಅಜ್ಜಿ ಸಾವು

ನಾಗೇಶ ಎಸ್

ನಂಜನಗೂಡು: ತಾಲೂಕಿನ ಅಲ್ಲಯ್ಯನಪುರ ಗ್ರಾಮದಲ್ಲಿ ಗುರುವಾರ ಮಗ-ಮೊಮ್ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಅಜ್ಜಿ ಸಾವಿಗೀಡಾಗಿದ್ದಾರೆ.

ಗ್ರಾಮದ ನಿವಾಸಿ ನಾಗಮ್ಮ(80) ಸಾವಿಗೀಡಾದವರು. ನಿತ್ಯದ ಖರ್ಚಿಗೆ ಹಣ ನೀಡುತ್ತಿಲ್ಲ ಎಂದು ಮಗ ಮಹೇಶ್ ಜತೆ ಮೊಮ್ಮಗ ಸಮಹದೇವ ಪ್ರಸಾದ್(ಪುನೀತ್) ಜೋರಾಗಿ ಗಲಾಟೆ ಮಾಡುತ್ತಿದ್ದ ಶಬ್ದ ಕೇಳಿ ಜಗಳ ಬಿಡಿಸಲು ಬಂದ ಅಜ್ಜಿ ನಾಗಮ್ಮ ಅವರನ್ನು ಮೊಮ್ಮಗ ಮಹದೇವಸ್ವಾಮಿ ರಭಸವಾಗಿ ತಳ್ಳಿದ್ದರಿಂದ ನೆಲಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು.

ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಅಜ್ಜಿಯ ಸಹೋದರ ನಾಗಣ್ಣ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಚೇತನ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.