ಜಮಖಂಡಿ ನಗರದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಅರುಣಕುಮಾರ ಶಹಾ ಮಾತನಾಡಿದರು. ಡಾ.ಎನ್.ಎಂ. ರೊಳ್ಳಿ, ಡಾ.ಬಿ.ಎಂ. ನುಚ್ಚಿ, ಪ್ರೊ. ಡಾ.ಪಿ.ಡಿ. ಪೋಳ, ಎಸ್.ಬಿ. ಕಮತಿ, ಬಿ.ಎಸ್. ದೇಸಾಯಿ, ಡಾ.ಎಂ.ಎಸ್.ಪಾಟೀಲ ಇತರರಿದ್ದರು. 
ಜಿಲ್ಲೆ

ನಾಳೆಯಿಂದ ಮಹಾ ಅಧಿವೇಶನ, ವಿವಿಧ ಕಾರ್ಯಕ್ರಮ

Vijayapura - Desk - Gurappa Lokuri

ಜಮಖಂಡಿ: ನಗರದ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿಯ ಸ್ನಾತಕೋತರ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಆಶ್ರಯದಲ್ಲಿ ಆ.26 ರಿಂದ 28ರ ವರೆಗೆ ದಿ ಕರ್ನಾಟಕ ಇತಿಹಾಸ ಪರಿಷತ್ 33ನೇ ಮಹಾ ಅಧಿವೇಶನ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆ ಅಧ್ಯಕ್ಷ ಅರುಣಕುಮಾರ ಶಹಾ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಧಾರವಾಡದ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ, ಧಾರವಾಡ ವಲಯ, ಬೆಂಗಳೂರಿನ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಮೈಸೂರಿನ ಕರ್ನಾಟಕ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗಳು ಸಹಯೋಗ ನೀಡುತ್ತಿವೆ. ಸಂಸ್ಥೆಯ ದರ್ಬಾರ ಹಾಲ್‌ನಲ್ಲಿ ಆ.26ರಂದು ಬೆಳಗ್ಗೆ 10 ಗಂಟೆಗೆ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕರ್ನಾಟಕ ಇತಿಹಾಸ ಪರಿಷತ್‌ನ 33ನೇ ವಾರ್ಷಿಕ ಮಹಾ ಅಧಿವೇಶನ ನಡೆಯಲಿದ್ದು, ಸಚಿವ ಎಚ್.ಕೆ. ಪಾಟೀಲ, ವಿ.ಪ. ಸದಸ್ಯ ಸುನೀಲಗೌಡ ಪಾಟೀಲ, ಡಾ. ಜಯರಾಮ, ಪ್ರೊ. ಎಸ್.ಎ. ಬಾರಿ, ಪ್ರೋ. ಆರ್. ರಾಜಣ್ಣ, ಪ್ರೊ. ಐ.ಕೆ. ಪತ್ತಾರ ಇತರರು ಆಗಮಿಸಲಿದ್ದಾರೆ. ದತ್ತಿನಿಧಿ ಉಪನ್ಯಾಸ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಡಾ.ಎನ್.ವಿ. ಅಸ್ಕಿ ಮಾತನಾಡಿ, ಕಾರ್ಯಕ್ರಮದಲ್ಲಿ ರಾಜ್ಯದ ಪ್ರಾಧ್ಯಾಪಕರು, ಇತಿಹಾಸಕಾರರು, ಪ್ರಾಂಶುಪಾಲರು, ಯುವ ಸಂಶೋಧಕರು ಪಾಲ್ಗೊಳ್ಳುವರು. ಪುಸ್ತಕ ಮಾರಾಟಗಳ ಜತೆಗೆ ಪುಸ್ತಕ ಪ್ರದರ್ಶನ ನಡೆಯಲಿದೆ. ಪೋಟೋ ಗ್ರಾಫಿ, ಮ್ಯೂಸಿಯಂ ಪ್ರದರ್ಶನ ನಡೆಯಲಿವೆ ಎಂದು ತಿಳಿಸಿದರು.
ಡಾ.ಎನ್.ಎಂ. ರೊಳ್ಳಿ, ಡಾ.ಬಿ.ಎಂ. ನುಚ್ಚಿ, ಪ್ರೊ. ಡಾ.ಪಿ.ಡಿ. ಪೋಳ, ಎಸ್.ಬಿ. ಕಮತಿ, ಬಿ.ಎಸ್. ದೇಸಾಯಿ, ಡಾ.ಎಂ.ಎಸ್.ಪಾಟೀಲ, ಶ್ರೀನಿವಾಸ ಕಟ್ಟಿಮನಿ ಇತರರಿದ್ದರು.