ಮಹಾಲಿಂಗಪುರದಲ್ಲಿ ವಾಸವಿ ಕನ್ನಿಕಾಪರಮೇಶ್ವರಿ ಜಯಂತಿ ಅಂಗವಾಗಿ ದೇವಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ವಾಸವಿ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ

ಮಹಾಲಿಂಗಪುರ: ನಗರದಲ್ಲಿ ಆರ್ಯವೈಶ್ಯ ಸಮಾಜದವರಿಂದ ಬುಧವಾರ ವಾಸವಿ ಕನ್ನಿಕಾಪರಮೇಶ್ವರಿ ಜಯಂತಿ ಆಚರಿಸಲಾಯಿತು.

ದೇವಿ ಭಾವಚಿತ್ರವನ್ನು ಮೆರವಣಿಗೆ ಬಸವೇಶ್ವರ ವೃತ್ತದ ಮಾರ್ಗವಾಗಿ ವಾಸವಿ ಮಂದಿರ ತಲುಪಿತು. ನಂತರ ತೊಟ್ಟಿಲು ತೂಗುವ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಪ್ರಸಾದವಿತರಣೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಪಟ್ಟಣದಲ್ಲಿ ಸಮಾಜದ ಸಕಲ ಕುಟುಂಬದವರು ಭಕ್ತಿಭಾವದಿಂದ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತ ಭಾವ ಅನುಭವಿಸಿದರು.

ಸಮಾಜದ ಮುಖಂಡ ವಿ.ಎನ್.ಗುಂಡಾ ಹಾಗೂ ಶ್ರೀಪಾದ ಗುಂಡಾ ಮಾತನಾಡಿದರು. ಸಮಾಜದ ಹಿರಿಯರಾದ ಸುಮಂಗಲಾ ಗುಂಡಾ, ಗೋಪಾಲ ಗುಂಡಾ, ಬಾಬು ಗುಂಡಾ, ರತ್ನಾಕರ ಗುಂಡಾ, ಶ್ರೀಧರ ತೆಪೂರ, ಶ್ರೀನಿವಾಸ ಗುಂಡಾ, ರಾಣಿ ಗುಂಡಾ,ನಾಗಾರ್ಜುನ ಗುಂಡಾ, ಮುರಳಿಧರ ಗುಂಡಾ, ಮನೋಹರ ಗುಂಡಾ, ಆನಂದ ಗುಂಡಾ, ಮಂಜುನಾಥ ಗುಂಡಾ, ಸಚಿನ್ ಗುಂಡಾ, ರಾಘವೇಂದ್ರ ಪ್ರಸಾದ ಗುಂಡಾ, ಸುಧೀರ ಗುಂಡಾ, ಅಮಿತ ಗುಂಡಾ, ಹರ್ಷಾ ಕೋಲಂಪಲ್ಲಿ ಮತ್ತಿತರರಿದ್ದರು.