ಜಿಲ್ಲೆ

ಪೇಜಾವರ, ಶಿರೂರು ಶ್ರೀಗಳ ಶೋಭಾಯಾತ್ರೆ...

ಬೆಂಗಳೂರಿನಲ್ಲಿ ಚಾತುರ್ಮಾಸ್ಯ

ಭಕ್ತರಿಂದ ಭವ್ಯ ಸ್ವಾಗತ, ಮೆರವಣಿಗೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬೆಂಗಳೂರಿನ ಬಸವನಗುಡಿಯ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿರುವ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ ಜುಲೈ 14ರಂದು ನಡೆಯಿತು.

ಚಾತುರ್ಮಾಸ್ಯದ ನಿಮಿತ್ತ ಭಕ್ತರು ಭವ್ಯ ಶೋಭಾಯಾತ್ರೆ ಮೂಲಕ ಶ್ರೀಗಳನ್ನು ಸ್ವಾಗತಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಶಾಸಕ ರವಿಸುಬ್ರಹ್ಮಣ್ಯ, ವಿಧಾನ ಪರಿಷತ್​ ಸದಸ್ಯ ಟಿ.ಎ. ಶರವಣ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ಉತ್ತರಾಧಿ ಮಠದ ನಿರ್ದೇಶಕ ಸತ್ಯಧ್ಯಾನಚಾರ್ಯ ಕಟ್ಟಿ, ಕೇಶವ ಬಾಯರಿ, ಶಿರೂರ ಮಠದ ದಿವಾನ ಡಾ.ಉದಯಕುಮಾರ್​ ಸರಳತ್ತಾಯ, ಅಖಿಲ ಭಾರತ ಮಾಧ್ವ ಮಂಡಲ ಅಧ್ಯಕ್ಷರಾದ ಗೌತಮ ಎಚ್​.ವಿ. ಮತ್ತು ಹರಿದಾಸ ಭಟ್​, ವೀರನಾರಾಯಣ ಪಾಂಡುರಂಗಿ, ಪಾರುಪತ್ಯಗಾರ ಶ್ರೀಶ ಭಟ್​ ಕಡೆಕಾರ್​, ವಿದ್ಯಾಪಿಠ ವ್ಯವಸ್ಥಾಪಕ ಶಶಾಂಕ್​ ಅಚಾರ್ಯ, ಕಾಂಗ್ರೆಸ್​ ಮುಖಂಡ ಬಾಲಾಜಿ ಇತರರು ಉಪಸ್ಥಿತರಿದ್ದರು.

ಶ್ರೀಗಳ ಶೋಭಾ ಯಾತ್ರೆಯು ನವ ಮಂತ್ರಾಲಯ ರಾಯರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಿದ್ಯಾಪೀಠ ರಸ್ತೆ ಮಾರ್ಗವಾಗಿ ಪೂರ್ಣಪ್ರಜ್ಞಾ ವಿದ್ಯಾಪೀಠದವರಗೆ ಸಾಗಿತು.

ನೂರಾರು ಆಗಮ ಪಂಡಿತರು, ಮಹಿಳಾ ಮಂಡಳಿಗಳಾದ ತ್ರಿಪುರಾ ಸುಂದರಿ, ಗಿರಿವಾಸವಿ ತಂಡದವರು ಭಕ್ತೀಗಿತೆ ಹಾಡಿದರು. ಯಕ್ಷಗಾನ ವೇಷಧಾರಿಗಳು, ಪೂಜಾ ಕುಣಿತ, ಡೊಳ್ಳು, ವೀರಗಾಸೆ, ತಮಟೆ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.