ಅಣ್ಣಿಗೇರಿ: ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆಗೆ ಸ್ಥಳೀಯ ದಾಸೋಹ ಮಠದ ಡಾ.ಶಿವಕುಮಾರ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು.
ದಿ.ದ್ಯಾಮಣ್ಣ ಗುರುಸ್ವಾಮಿ ಶಿಷ್ಯರಾದ ವಿನಯ ರೇವಣಕರ ಗುರುಸ್ವಾಮಿಗಳ ನೇತೃತ್ವದಲ್ಲಿ ಮೆರವಣಿಗೆ ವೈಭವೋಪೇರಿತವಾಗಿ ಜರುಗಿತು. ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಹೊತ್ತ ಮಹಿಳೆಯರು ಸಾಗಿದರು. ಸ್ವಾಮಿ ಶರಣಂ ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಘೊಷವಾಕ್ಯ ಮುಗಿಲು ಮುಟ್ಟಿದವು.
ರಾಜು ರಾಯ್ಕರ್, ರವಿ ಅಂಗಡಿ, ಮಂಜುನಾಥ ಹಡಪದ, ರಾಜೇಶ್ವರರಾವ್ ದೇಸಾಯಿ, ಮಹಾಂತೇಶ ಹಕರಕ್ಕಿ, ಹೇಮಂತ ಕುರಹಟ್ಟಿ, ಸಂಜೀವಕುಮಾರ ನಾಗನಕೇರಿ, ಅಮೃತ ಮರಡ್ಡಿ ಸೇರಿ ನೂರಾರು ಭಕ್ತರು ಇದ್ದರು.
ಮಹಾಪೂಜೆ ನಾಡಿದ್ದು: ಪಟ್ಟಣದ ಅಮೃತೇಶ್ವರ ಆವರಣದಲ್ಲಿ ಜ. 5ರಂದು ಅಯ್ಯಪ್ಪಸ್ವಾಮಿ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.