ಜಿಲ್ಲೆ

17ರಂದು ಭವ್ಯ ಪಿಂಛಿ ಪರಿವರ್ತನಾ ಸಮಾರಂಭ

Avinash R

ಬೆಳ್ತಂಗಡಿ: ನಾರಾವಿ ಬಳಿ ಇರುವ ಹೊಸ್ಮಾರು ಸಿದ್ಧರವನ ಭಗವಾನ್ ಮಹಾವೀರಸ್ವಾಮಿ ಬಸದಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ಭವ್ಯ ಪಿಂಛಿ ಪರಿವರ್ತನಾ ಸಮಾರಂಭ ನ.17ರಂದು ನಡೆಯಲಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎನ್.ಪ್ರೇಮ್ ಕುಮಾರ್ ಹೊಸ್ಮಾರು ತಿಳಿಸಿದ್ದಾರೆ.

ಬೆಳಗ್ಗೆ ಗಂಟೆ 7.30ರಿಂದ ಬಸದಿಯಲ್ಲಿ ಸಾಮೂಹಿಕ ಪಂಚಪರಮೇಷ್ಠಿ ಆರಾಧನೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಮಹಿಳಾ ಕಾರ್ಯಾಧಕ್ಷೆ ಅನಿತಾ ಸುರೇಂದ್ರ ಕುಮಾರ್, ಸುದರ್ಶನ್ ಜೈನ್, ಜೈನ್ ಟ್ರಾವೆಲ್ಸ್ ಮಾಲೀಕ ರತ್ನಾಕರ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೊರನಾಡು ಜಯಶ್ರೀ ಜೈನ್ ಮತ್ತು ಬಳಗದವರಿಂದ ಜಿನಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.