ಜಿಲ್ಲೆ

ಭಟ್ಕಳದಲ್ಲಿ ಆರೆಸ್ಸೆಸ್​ನಿಂದ ಭವ್ಯ ಪಥಸಂಚಲನ

ದೀಪಕ ತಲವಾಯಿ

ಭಟ್ಕಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಭಟ್ಕಳ ವತಿಯಿಂದ ಗಣವೇಷಧಾರಿ ಸ್ವಯಂಸೇವಕರು ಆಯೋಜಿಸಿದ್ದ ಭವ್ಯ ಪಥಸಂಚಲನಕ್ಕೆ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.

ಪಥ ಸಂಚಲನ ಎರಡು ಮಾರ್ಗಗಳ್ಲಲಿ ಸಂಚರಿಸಿತು. ಮೊದಲ ಮಾರ್ಗವು ದಿ. ನ್ಯೂ.ಇಂಗ್ಲಿಷ್ ಸ್ಕೂಲ್ ಮಾರ್ಗವಾಗಿ ಸೋನಾರಕೇರಿ, ಆಸರಕೇರಿ ಮೂಲಕ ಮುಖ್ಯರಸ್ತೆ ಮುಖಾಂತರ ಮಾರಿಕಾಂಬ ದೇವಸ್ಥಾನ, ರಥಬೀದಿ-ಹೂವಿನ ಪೇಟೆ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಮತ್ತೆ ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಪಿಎಲ್​ಡಿ ಬ್ಯಾಂಕ್​ನ ರಾಷ್ಟ್ರೀಯ ಹೆದ್ದಾರಿ ಮೂಲಕ ಭಟ್ಕಳ ಸರ್ಕಲ್ ಪ್ರವೇಶಿಸಿತು.

ಇನ್ನೊಂದು ಮಾರ್ಗ ದಿ.ನ್ಯೂ ಇಂಗ್ಲಿಷ್ ಸ್ಕೂಲ್ ಮೂಲಕ ಬಂದರು ರಸ್ತೆ ಭಟ್ಕಳ ಸರ್ಕಲ್, ಸಾಗರ ರಸ್ತೆ, ನಾಯಕಹೆಲ್ತ್ ಸೆಂಟರ್ ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ ಡಿ.ಪಿ. ಕಾಲನಿ ರಸ್ತೆ (ಸುದೀಂಧ್ರ ಕಾಲೇಜು ಹಿಂಭಾಗ)-ಮೆಲ್​ಹಿತ್ಲು ಮೂಲಕ ಹುರುಳಿಸಾಲ ಅಲ್ಲಿಂದ ಸಾರ್ವಜನಿಕ ಗಣೇಶೋತ್ಸವ ಭವನ, ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ -ಡಾ. ಚಿತ್ತರಂಜನ ಮನೆ ಕ್ರಾಸ್-ಹಳೇ ವೈಭವ ಎದುರಗಡೆಯಿಂದ ಮತ್ತೆ ಭಟ್ಕಳ ಸರ್ಕಲ್ ಪ್ರವೇಶಿಸಿ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಅಂತ್ಯಗೊಂಡಿತು.

ಪಥ ಸಂಚಲನದಲ್ಲಿ ನೆಹರೂ ರಸ್ತೆ ನಿವಾಸಿ 87 ವರ್ಷದ ವಿಠ್ಠಲ್ ರಾಮ ಪ್ರಭು ಅವರ ನಡೆ ಯುವಕರನ್ನು ನಾಚಿಸುವಂತಿತ್ತು.