ಜಿಲ್ಲೆ

ಕೂಡಿಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2024-25 ಸಾಲಿನ ಗ್ರಾಮ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಳೆದ ಸಾಲಿನ ಗ್ರಾಮ ಸಭೆಯ ನಡವಳಿಕೆಯ ಮೇಲೆ ಚರ್ಚೆಗಳು ಆರಂಭಗೊAಡು ಕಳೆದ ಸಾಲಿನಲ್ಲಿ ಚರ್ಚೆಗೊಂಡ ಯಾವುದೇ ಪ್ರಮುಖ ಕಾರ್ಯಗಳು ಇದುವರೆಗೂ ನಡೆಯದೆ ಗ್ರಾಮ ಪಂಚಾಯತಿ ಅಧಿಕಾರಿ ವರ್ಗದವರು ಮನಬಂದAತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಿ.ಡಿ ಅಣ್ಣಯ್ಯ, ಕಾಂತರಾಜ್, ರಾಜ, ಪ್ರಕಾಶ್, ಮಲ್ಲೇಶ್, ಮಂಜುನಾಥ ಕೃಷ್ಣ ಸಭೆಯಲ್ಲಿ ಅರೋಪಿಸಿದರು.

ಕಳೆದ ಸಾಲಿನಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳಾದ ರಸ್ತೆ, ಮತ್ತು ವಿವಿಧ ಕಾಮಗಾರಿಗಳ ಬಗ್ಗೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯ ವಹಿಸಿರುವುದು, ಕಂದಾಯ ಇಲಾಖೆ ವತಿಯಿಂದ ಗ್ರಾಮದ ಪ್ರಮುಖ ಉಪ ರಸ್ತೆಗಳ ಉಪ ದಾರಿಗಳು, ಮತ್ತು ಕೆಲವು ಭಾಗಗಳಲ್ಲಿ ವತ್ತುವರಿಯಾದ ಜಾಗದ ಸರ್ವೆ , ಬಾಕಿರುವ ಕಾಮಗಾರಿಗಳು, ಈಗಾಗಲೇ ಕಾಯ್ದಿರಿಸಿದ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶಕ್ಕೆ ಜಾಗವನ್ನು ನೀಡುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಕಾಶ್, ಸೋಮಣ್ಣ ರಾಜ , ಸೋಮಶೇಖರ್ ಒತ್ತಾಯ ಮಾಡಿದರು.

ಗ್ರಾಮ ಪಂಚಾಯತಿ ವತಿಯಿಂದ ಕೂಡಿಗೆ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಗ್ರಾಮ ಪಂಚಾಯತಿ ವತಿಯಿಂದ ಸಭೆಯ ಆಡಳಿತ ಮಂಡಳಿಯ ಗಮನಕ್ಕೆ ತರದೆ ಪರವಾನಿಗೆ ನೀಡಿರುವ ವಿಷಯಗಳ ಬಗ್ಗೆ ಸುರ್ದೀಘ ಚರ್ಚೆಗಳು ನಡೆದವು. ಈ ಸಂದರ್ಭ ಅಬಕಾರಿ ಇಲಾಖೆ ಠಾಣಾಧಿಕಾರಿ ಲೋಕೇಶ್ ನಸಭೆಗೆ ಮಾಹಿತಿ ನೀಡಿ, ಮದ್ಯದ ಅಂಗಡಿ ತೆರೆಯಲು ಇಲಾಖೆಯ ನಿಯಮಾನುಸಾರ ಮೇಲಾಧಿಕಾರಿ ವರ್ಗದವರು ಲೈಸೆನ್ಸ್ ನೀಡಿರುತ್ತಾರೆ . ಅದಕ್ಕೆ ಪ್ರತಿಯಾಗಿ ವಿರೋಧ ವ್ಯಕ್ತಪಡಿಸುವವರು ಸಂಬAಧಿಸಿದ ಇಲಾಖೆಗೆ ಮಾಹಿತಿಯನ್ನು ನೀಡಬಹುದು ಎಂದರು. ಕೂಡಿಗೆ ಸರ್ಕಲ್‌ನಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಬಾಲಕೃಷ್ಣ, ನಾಗರಾಜ ಮೋಹನ್ ಸೇರಿದಂತೆ ಹಲವರು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ಸಮಗ್ರವಾಗಿ ಸಭೆಯಲ್ಲಿ ತಿಳಿಸಿದರು. ಸಭೆಗೆ ಅನೇಕ ಇಲಾಖೆಯ ಅಧಿಕಾರಿಗಳು ಬಾರದ ಕಾರಣ, ಮುಂದಿನ ಸಭೆಗಳಿಗೆ ಹಾಜರಾಗಲು ಸಂಬAಧಿಸಿದ ಇಲಾಖೆಯವರಿಗೆ ಪತ್ರವ್ಯವಹಾರ ಮಾಡುವಂತೆ ಹಾಜರಿದ್ದ ಗ್ರಾಮಸ್ಥರು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಮಾತಾನಾಡಿ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ಈಗಾಗಲೇ ನೋಂದಣಿ ಪುಸ್ತಕದಲ್ಲಿ ನೋಂದಾಯಿಸಲಾಗಿದೆ. ಅದರ ಮುಖೇನ ಸಂಬAಧಿಸಿದ ಇಲಾಖೆಯವರಿಗೆ ಪತ್ರವ್ಯವಹಾರ ಮಾಡಲಾಗುವುದು. ಅದರಂತೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.

ಸಭೆಯ ನೋಡಲ್ ಅಧಿಕಾರಿಯಾಗಿ ಕೂಡಿಗೆ ಕೋಳಿ ಸಾಕಾಣಿಕೆ ಕೇಂದ್ರದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಕೆ. ನಾಗರಾಜ ಆಗಮಿಸಿದ್ದರು.

ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಅರುಣ್ ರಾವ್, ಟಿ.ಪಿ. ಹಮೀದ್, ಅನಂತ, ಮೋಹಿನಿ, ಮಂಗಳ, ಕೆ.ಎಸ್ ಶಿವಕುಮಾರ್, ವಾಣಿ, ರತ್ನಮ್ಮ, ಹೆಚ್.ಎಸ್. ರವಿ, ಪಲ್ಲವಿ, ಲಕ್ಷ್ಮಿ, ಚಂದ್ರು, ಜಯಶೀಲಾ, ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನೀತ್ ಸಭೆಯಲ್ಲಿ ಇದ್ದರು.