ತುಮಕೂರು : ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಸಿ.ಗೌರಿಶಂಕರ್ ಭಾನುವಾರ ಶಂಕುಸ್ಥಾಪನೆ ಮತ್ತು ಕೋಡಿಬಿದ್ದ ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿದರು. ಗಂಗಾಪೂಜೆ ಕಾರ್ಯಕ್ರಮಕ್ಕೆ ಭಾಗವಹಿಸಿದ 4000ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ, ಅರಿಶಿಣ-ಕುಂಕುಮ, ಬಳೆ ನೀಡುವ ಮೂಲಕ ಬಾಗಿನ ನೀಡಿದರು.
ಅಲ್ಲದೆ ದೇವರಾಯನದುರ್ಗ ಬೆಟ್ಟದಲ್ಲಿ ಸಮಗ್ರ ಅಭಿವೃದ್ದಿಗೆ 18 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಸಿಸಿ ಚರಂಡಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಾಣ ವಾಡಿ ಅನುಕೂಲ ಕಲ್ಪಿಸಿಕೊಡುವ ಜತೆಗೆ ದೇವರಾಯನದುರ್ಗ ಬೆಟ್ಟದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಪ್ರವಾಸಿ ಮಂದಿರ ನಿರ್ವಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಕೆಸರುಮಡು ಗ್ರಾಮದ ಜೋಗಿಕಟ್ಟೆ ಕೆರೆ, ದುರ್ಗದಹಳ್ಳಿ ಕೆರೆ ಹಾಗೂ ಕೋಳಿಹಳ್ಳಿ ಕೆರೆ ತುಂಬಿ ಕೋಡಿ ಹರಿದಿದ್ದು, ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯ ಕೆರೆಗೆ ಕಾಲುವೆ ಮೂಲಕ ಹೇಮಾವತಿ ನೀರು ಹರಿಸಿ, ನಾಲ್ಕು ಕೆರೆಗಳಿಗೂ ಗಂಗಾ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿದರು.
ಕರೊನಾ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಇಡೀ ಕ್ಷೇತ್ರದ ಜನತೆಗೆ ಸ್ವಂತ ಖರ್ಚಿನಲ್ಲಿ ಆಹಾರ ಪದಾರ್ಥಗಳ ಕಿಟ್ ಜತೆಗೆ ರೈತರಿಂದ ತರಕಾರಿ ಖರೀದಿಸಿ ಕ್ಷೇತ್ರದ ಜನತೆಗೆ ವಿತರಿಸಿದ್ದೇನೆ. ಇಷ್ಟೇ ಅಲ್ಲದೇ ಬಡವರಿಗೆ ಉಚಿತ ಔಷಧ ವಿತರಿಸಿ ಸೇವೆ ಸದಾ ಸಿದ್ಧ ಎಂಬುದನ್ನು ತೋರಿಸಿದ್ದೇನೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಕೃಷಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರೈತರಿಗೆ ಅಗತ್ಯವಾಗಿ ಬೇಕಾದ ನೀರಿನ ಸೌಕರ್ಯ ಕಲ್ಪಿಸಲು ಮುಂದಾಗಿದ್ದು, ವೃಷಭಾವತಿ ನದಿ ನೀರನ್ನು ಗ್ರಾವಾಂತರಕ್ಕೆ ತಂದು ಗ್ರಾವಾಂತರ ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ವಾಟರ್ ಕ್ಯಾನ್ ವಿತರಣೆ: ಹಾಲುಗೊಂಡನಹಳ್ಳಿ ಹಾಗೂ ಬೆಟ್ಟಶೀತಕಲ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕದ ಉದ್ಘಾಟನೆ ಮಾಡಿ ಎರಡು ಗ್ರಾಮಗಳಲ್ಲಿ ಸುವಾರು 600 ವಾಟರ್ ಕ್ಯಾನ್ ಹಾಗೂ 600 ಸೀರೆಗಳನ್ನು ಶಾಸಕ ಗೌರಿ ಶಂಕರ್ ವಿತರಿಸಿದರು. ಆಲದಮರಪಾಳ್ಯ, ವಿಟ್ಟರಾವುತ್ತನಹಳ್ಳಿ, ಜನತಾಕಾಲನಿ, ಬೇವಿನಳ್ಳಿಪಾಳ್ಯ ಮತ್ತು ಊರ್ಡಿಗೆರೆ ಟೆಂಟ್‌ಗಳಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿದರು.