ಜಿಲ್ಲೆ

ಗ್ರಾಪಂ ಜಮಾಬಂದಿ ಕಾರ್ಯಕ್ರಮ ನಾಳೆಯಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಘಟಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯತ ಜಮಾಬಂದಿ ಕಾರ್ಯಕ್ರಮವನ್ನು ಆ. 16ರಿಂದ ಆ. 30ರವರೆಗೆ ಆಯೋಜಿಸಲಾಗುವುದು. ಕಾರ್ಯಕ್ರಮ ಆಯೋಜನೆಗೊಂಡ ಗ್ರಾಪಂ, ದಿನಾಂಕ, ವೇಳೆ ಹಾಗೂ ಸಮನ್ವಯ ಅಧಿಕಾರಿಗಳ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಗುಡ್ಡದಹುಲಿಕಟ್ಟಿ, ದುಮ್ಮವಾಡ, ಕುರುವಿನಕೊಪ್ಪ, ದಾಸ್ತಿಕೊಪ್ಪ, ತಾವರಗೇರಿ, ಮುಕ್ಕಲ್​, ದೇವಲಿಂಗೆಕೊಪ್ಪ, ಮಡಕಿಹೊನ್ನಳ್ಳಿ, ಬೀರವಳ್ಳಿ, ಸಂಗಮೇಶ್ವರ, ಜಿನ್ನೂರ, ಮುತ್ತಗಿ, ಗಂಭ್ಯಾಪುರ, ಜಿ.ಬಸವನಕೊಪ್ಪ, ಹಿರೇಹೊನ್ನಳ್ಳಿ, ದೇವಿಕೊಪ್ಪ, ತಬಕದಹೊನ್ನಳ್ಳಿ, ಗಂಜಿಗಟ್ಟಿ, ತಂಬೂರ, ಸೂಳಿಕಟ್ಟಿ, ಸುರಶೆಟ್ಟಿಕೊಪ್ಪ, ಬಮ್ಮಿಗಟ್ಟಿ, ಮಿಶ್ರಿಕೋಟಿ, ಉಗ್ಗಿನಕೇರಿ, ಭೋಗೆನಾಗರಕೊಪ್ಪ, ಬೆಲವಂತರ ಗ್ರಾಪಂ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.