ಜಿಲ್ಲೆ

ಹುಣಶೆಟ್ಟಿಕೊಪ್ಪದಲ್ಲಿ ಗ್ರಾಮದೇವಿ ಜಾತ್ರೆ

Uttara Kannada - Subash Hegde

ಯಲ್ಲಾಪುರ: ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಗ್ರಾಮದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ.  ಪ್ರತಿನಿತ್ಯ ಉಡಿ, ಹಣ್ಣಕಾಯಿ ಸೇವೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಶುಕ್ರವಾರ ಸಾವಿರಾರು ಭಕ್ತರು ಗ್ರಾಮದೇವಿಗೆ ಸೇವೆ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಸಮೀಪದಲ್ಲೇ ಇರುವ ಅಮ್ಯೂಸ್ ಮೆಂಟ್ ಪಾರ್ಕ್ ಜನರ ಗಮನ ಸೆಳೆಯುತ್ತಿದೆ.  ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಫೆ.29 ರಂದು ಗ್ರಾಮದೇವಿ ಮೆರವಣಿಗೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.