ಜಿಲ್ಲೆ

ಜಿಪಂ ಕಚೇರಿ ಎದುರು ಗ್ರಾಪಂ ನೌಕರರ ಅಹೋರಾತ್ರಿ ಧರಣಿ

Tumakuru

ತುಮಕೂರು: ಬಾಕಿ ವೇತನ ಬಿಡುಗಡೆ, ಇಎ್ಎಂಎಸ್‌ಗೆ ಸೇರ್ಪಡೆ, ಅನುಮೋದನೆ, ಬಡ್ತಿ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂವು ಸಿಐಟಿಯು ನೇತೃತ್ವದಲ್ಲಿ ನಗರದ ಜಿಪಂ ಕಚೇರಿ ಎದುರು ಮಂಗಳವಾರದಿಂದ ಆರಂಭಿಸಿರುವ ಅಹೋರಾತ್ರಿ ಧರಣಿ 2ನೇ ದಿನಕ್ಕೆ ಕಾಲಿರಿಸಿದೆ.

ಕರೊನಾ ನಿಯಂತ್ರಣಕ್ಕಾಗಿ ಪಂಚಾಯಿತಿ ಸಿಬ್ಬಂದಿ ದುಡಿಯುತ್ತಿದ್ದರೂ ಅವರಿಗೆ ನಾಲ್ಕು ವರ್ಷಗಳಿಂದ ಬಾಕಿ ವೇತನ ನೀಡಿಲ್ಲ. ಬಾಕಿ ವೇತನ ಕೊಡುವಂತೆ ಆದೇಶವಿದ್ದರೂ ಪಿಡಿಒಗಳು ಜಾರಿಗೊಳಿಸುತ್ತಿಲ್ಲ ಎಂದು ಸಂದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ ದೂರಿದರು.

ಎಲ್ಲ ಸಿಬ್ಬಂದಿಯನ್ನು ಇಎಫ್‌ಎಂಎಸ್‌ಗೆ ಸೇರ್ಪಡೆ ವಾಡಬೇಕು, ನಿವೃತ್ತಿಯಾದವರಿಗೆ ಉಪಧನ ನೀಡಬೇಕು, ತೆರಿಗೆ ಸಂಗ್ರಹದಲ್ಲಿ ಶೇ.40 ವೇತನ ಕೊಡಬೇಕು. ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಬೇಕು, 14ನೇ ಹಣಕಾಸು ಆಯೋಗದಲ್ಲಿ ಶೇ.10ರ ಆಡಳಿತ ವೆಚ್ಚದಲ್ಲಿ ಸಿಬ್ಬಂದಿಗೆ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ನೌಕರರು ಕರೊನಾ ಸೇನಾನಿಗಳಾಗಿ ಕೆಲಸ ವಾಡುತ್ತಿದ್ದು, ಪಿಪಿಇ ಕಿಟ್ ನೀಡಬೇಕು ಹಾಗೂ ಅವರ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾ ಸಿಐಟಿಯು ಅಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.

ಪ್ರತಿಭಟನೆ ಬೆಂಬಲಿಸಿ ವಾತನಾಡಿದ ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಪಂಚಾಯಿತಿ ನೌಕರರ ಬೇಡಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಅಹೋರಾತ್ರಿ ಧರಣಿಯಲ್ಲಿ ಗುಬ್ಬಿಯ ಬಷೀರ್ ಅಹಮದ್, ತುರುವೇಕೆರೆ ರಮೇಶ್, ತಿಪಟೂರಿನ ರಾಜು, ಕಂಪ್ಯೂಟರ್ ಆಪರೇಟರ್ ಗಂಗಣ್ಣ, ಕೊರಟಗೆರೆಯ ನಾಗಭೂಷಣ್, ಕುಣಿಗಲ್‌ನ ಶ್ರೀನಿವಾಸ್, ಚಿಕ್ಕನಾಯಕನಹಳ್ಳಿಯ ಚಂದ್ರಪ್ಪ, ಲೋಕೇಶ್, ತುಮಕೂರಿನ ಪಂಚಾಕ್ಷರಿ, ಶಿರಾದ ಲಕ್ಷ್ಮಮ್ಮ, ಚೇತನ, ಶಂಶುದ್ದೀನ್ ಉನ್ನೀಸಾ ಮತ್ತಿತರರು ಇದ್ದರು.

ನೌಕರ ವಿರೋಧಿ ಕ್ರಮ: ಪಂಪ್ ಆಪರೇಟರ್‌ಗಳಿಗೆ ಅರ್ಧ ಸಂಬಳ ನೀಡಲು ಮುಂದಾದ ಸರ್ಕಾರ ನೌಕರ ವಿರೋಧಿ ಕ್ರಮ ಕೈಬಿಡಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ವಾಡಬೇಕು. ಕನಿಷ್ಠ ವೇತನ ಪಡೆಯುವ ಎಲ್ಲರಿಗೂ ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಆದಾಯ ಮೀತಿ 1.20 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಖಜಾಂಚಿ ರಂಗನಾಥ್ ಮನವಿ ಮಾಡಿದರು.

ನೇಮಕಾತಿಗೆ ನಿರ್ದೇಶನ ನೀಡಿ: ಬಿಲ್‌ಕಲೆಕ್ಟರ್, ಗುವಾಸ್ತ, ಕಂಪ್ಯೂಟರ್ ಆಪರೇಟರ್‌ಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ ಜಾರಿಗೊಳಿಸಬೇಕು, ಎಲ್ಲ ಸಿಬ್ಬಂದಿಯನ್ನು ಅನುಮೋದನೆ ವಾಡಬೇಕು, ಸೇವಾಪುಸ್ತಕ ತೆರೆಯಬೇಕು ಎಂದು ಒತ್ತಾಯಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್, ಪಂಪ್ ಆಪರೇಟರ್‌ಗಳನ್ನು ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು, ನೇಮಕಾತಿಗೆ ನಿರ್ದೇಶನ ನೀಡಬೇಕೆಂದು ಮನವಿ ವಾಡಿದರು.