ಕೂಡಿಗೆ ಗ್ರಾಪಂ ಆಡಳಿತ ಮಂಡಳಿಯ ತುರ್ತು ಸಭೆಯು ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಅರುಣ್‌ರಾವ್, ಎಚ್.ಎಸ್.ರವಿ, ಅನಂತ, ಚಂದ್ರು, ಶಿವಕುಮಾರ್ ಇತರರು ಇದ್ದರು. 
ಜಿಲ್ಲೆ

ಶುದ್ಧ ಕುಡಿಯುವ ನೀರು ಪೂರೈಕೆಗೆ ನಿರ್ಧಾರ

ನಾಗೇಶ ಎಸ್

ಕುಶಾಲನಗರ: ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ತುರ್ತು ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಕೂಡಿಗೆ ಸರ್ಕಾರಿ ಶಾಲೆಯ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಈ ವಿಚಾರವಾಗಿ ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು. ಆದ್ದರಿಂದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆದು, ಗ್ರಾಮ ಪಂಚಾಯಿತಿ ಅನುದಾನ ಬಳಕೆ ಮಾಡಿ ಘಟಕದ ಯಂತ್ರ ದುರಸ್ತಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖೇನ ಅದಕ್ಕೆ ಬೇಕಾಗುವ ನೀರಿನ ಸೌಕರ್ಯಗಳನ್ನು ಒದಗಿಸುವ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಪಂ ಸದಸ್ಯರಾದ ಅರುಣ್‌ರಾವ್, ಎಚ್.ಎಸ್.ರವಿ, ಅನಂತ, ಚಂದ್ರು, ಶಿವಕುಮಾರ್, ಮೋಹಿನಿ ತಮ್ಮೇಣೇಗೌಡ, ಮಂಗಳಾ, ಜಯಶೀಲಾ, ರತ್ನಮ್ಮ, ಇಂಜಿನಿಯರ್ ಕೀರ್ತನ್, ಅಭಿವೃದ್ಧಿ ಅಧಿಕಾರಿ ಮಂಜುಳಾ ಹಾಜರಿದ್ದರು.