ಜಿಲ್ಲೆ

ಶಾಸಕ ಜಿ.ಟಿ.ದೇವೇಗೌಡ ಹುಣಸೂರಿಗೆ ಶಿಫ್ಟ್: ಅಚ್ಚರಿ ಮೂಡಿಸಿದ ಜೆಡಿಎಸ್ ವರಿಷ್ಠರ ತೀರ್ಮಾನ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಗೆಲುವಿನ ರಣತಂತ್ರ ಎಣೆಯಲು ಸಿದ್ಧವಾಗಿವೆ. ಹೀಗಿರುವಾಗ ಜೆಡಿಎಸ್​ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಬಹಳ ಅಚ್ಚರಿ ಮೂಡಿಸಿದೆ.

ಪಕ್ಷದ ಪ್ರಮುಖ ನಾಯಕರಿಗೆ ಕ್ಷೇತ್ರವಾರು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ. ಸ್ಥಳೀಯ ಶಾಸಕರಿದ್ದರೂ ನಾಯಕರ ಅದಲು-ಬದಲು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶಾಸಕ ಜಿ.ಟಿ.ದೇವೇಗೌಡರನ್ನು ಚಾಮುಂಡೇಶ್ವರಿ ಬದಲು ಹುಣಸೂರಿಗೆ ಶಿಫ್ಟ್​ ಮಾಡಲಾಗಿದೆ.

ಜಿಟಿಡಿ ಮಾತ್ರವಲ್ಲ ಪಿರಿಯಾಪಟ್ಟಣಕ್ಕೆ ತಿ.ನರಸೀಪುರ ಶಾಸಕರಿಗೆ ಹೊಣೆ ನೀಡಲಾಗಿದೆ. ಜೆಡಿಎಸ್ ಕ್ಷೇತ್ರವಾರು ಹೊಣೆಗಾರಿಕೆ ಹಂಚಿಕೆ ಮಾಡಿರುವ ಪಟ್ಟಿ ಈ ಕೆಳಕಂಡಂತಿದೆ.

  • ಹುಣಸೂರು: ಶಾಸಕ ಜಿ.ಟಿ.ದೇವೇಗೌಡ
  • ಕೆ.ಆರ್.ನಗರ: ಸಾ.ರಾ.ಮಹೇಶ್
  • ಪಿರಿಯಾಪಟ್ಟಣ: ಎಂ.ಅಶ್ವಿನ್ ಕುಮಾರ್
  • ಎಚ್.ಡಿ.ಕೋಟೆ: ಶಾಸಕ ಕೆ.ಮಹದೇವು
  • ಸರಗೂರು: ಮಾಜಿ ಶಾಸಕ ಚಿಕ್ಕಣ್ಣ
  • ಮೈಸೂರು: ಅಬ್ದುಲ್ ಅಜೀಜ್
  • ನಂಜನಗೂಡು: ಪ್ರೊ.ಕೆ.ಎಸ್.ರಂಗಪ್ಪ
  • ತಿ.ನರಸೀಪುರ: ಮೇಯರ್ ತಸ್ನೀಂ ಮತ್ತು ಮಾಜಿ ಮೇಯರ್ ರವಿಕುಮಾರ್