ಜಿಲ್ಲೆ

ಮತದಾನಕ್ಕೆ ಕರೆದೊಯ್ಯುತ್ತಿದ್ದ ಕಾರು ಪಲ್ಟಿ, 11 ಜನರ ಸ್ಥಿತಿ ಗಂಭೀರ

arunakunigal

ಬೀದರ್: ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯ 2ನೇ ಹಂತದ ಮತದಾನ ಇಂದು (ಭಾನುವಾರ) ನಡೆದಿದೆ,. ಈ ವೇಳೆ ಕೆಲವೆಡೆ ಗಲಾಟೆ, ಅಭ್ಯಥಿ ಮೇಲೆ ಹಲ್ಲೆ, ಮತಗಟ್ಟೆ ಆವರಣದಲ್ಲಿ ಲಘುಲಾಠಿ ಪ್ರಹಾರ ಸೇರಿದಂತೆ ನಾನಾ ಕಾರಣಕ್ಕೆ ಅಹಿತಕರ ಘಟನೆಗಳು ಸಂಭವಿಸಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಆಗಮಿಸುತ್ತಿದ್ದ ವೇಳೆ ಇನ್ನೊವಾ ಕಾರು ಪಲ್ಟಿಯಾಗಿದೆ.

ಮತ ಚಲಾಯಿಸಲೆಂದು ಮಹಾರಾಷ್ಟ್ರದ ಪೂನಾದಿಂದ ಇನ್ನೋವಾ ಕಾರಿನಲ್ಲಿ ಮತದಾರರು ಆಗಮಿಸುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ ಉಮ್ಮಾಪೂರ ಕ್ರಾಸ್ ಬಳಿ ಕಾರು ಪಲ್ಟಿಯಾಗಿದೆ.

ಇನ್ನೊವಾ ಕಾರನಲ್ಲಿದ್ದ 11 ಜನರು ಗಂಭೀರ ಗಾಯಗೊಂಡಿದ್ದು, ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರೂ ಔರಾದ್​​ ತಾಲೂಕಿನ ರಕ್ಷಾಳ(ಕೆ)‌ ಗ್ರಾಮದವರು. ಸ್ಥಳಕ್ಕೆ ಬಸವಕಲ್ಯಾಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.