ಮಡಿಕೇರಿ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಿಕೊಡ್ಲಿ ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಮತದಾರರೊಬ್ಬರಿಗೆ ನೀಡಿದ್ದ ಕುಕ್ಕರ್ ಹಿಂಪಡೆದ ಕುತೂಹಲಕಾರಿ ಘಟನೆ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ಯಾಕ್ಟರ್ ಗುರುತಿನ ಅಭ್ಯರ್ಥಿ ಚುನಾವಣಾ ಮುನ್ನ ದಿನ ಮತದಾರರಿಗೆ ಕುಕ್ಕರ್ ನೀಡಿ ಓಲ್ಯೆಸುವ ಪ್ರಯತ್ನ ಮಾಡಿದ್ದರು. ಕಿರಿಕೊಡ್ಲಿ ಕಾಲನಿ ನಿವಾಸಿ ಲತಾ ಮಣಿಕಂಠ ಎಂಬುವರಿಗೂ ಕುಕ್ಕರ್ ನೀಡಿದ್ದರು. ಕೊಡ್ಲಿಪೇಟೆ ಗ್ರಾಪಂ ವ್ಯಾಪ್ತಿಗೆ ಸೇರುವ ಕೆಲಕೊಡ್ಲಿ ವಾರ್ಡ್ನ ಮತದಾರರ ಪಟ್ಟಿಯಲ್ಲೂ ಲತಾ ಹೆಸರಿದೆ.
ಅಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಅವರ ಪರ ಮತ ಚಲಾಯಿಸಿದ್ದಾರೆ. ಈ ಮಾಹಿತಿ ಅರಿತು ಕಿರಿಕೊಡ್ಲಿ ಕ್ಷೇತ್ರದ ಕುಕ್ಕರ್ ನೀಡಿದ ಅಭ್ಯರ್ಥಿ ಸಂಜೆ ಮನೆಗೆ ಬಂದು ಕುಕ್ಕರ್ ಕಿತ್ತುಕೊಂಡು ಹೋಗಿದ್ದಾರೆ.