ಗೋಕಾಕ ನಗರದ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಸೇರಿದ ಜಾತ್ರಾ ಕಮಿಟಿ ಸಭೆಯಲ್ಲಿ ಎಸ್.ಎ.ಕೊತವಾಲ್ ಮತ್ತು ಸಿದ್ದಲಿಂಗ ದಳವಾಯಿ, ಪ್ರಭಾಕರ ಚವ್ಹಾಣ, ಅಶೋಕ ಪಾಟೀಲ, ಅಡಿವೆಪ್ಪ ಕಿತ್ತೂರು ಇತರರು ಪಾಲ್ಗೊಂಡಿದ್ದರು. 
ಜಿಲ್ಲೆ

ಗ್ರಾಮದೇವಿಯರ ಜಾತ್ರೆ 2 ವರ್ಷ ಮುಂದೂಡಿಕೆ

ಗೋಕಾಕ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಜರುಗಲಿದ್ದ ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳ ಕಾಲ ಮುಂದೂಡಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಮಂಗಳವಾರ ಸೇರಿದ ಸಭೆಯಲ್ಲಿ ಕರೊನಾ ವೈರಸ್ ಬಗ್ಗೆ ಸುರ್ದೀಘವಾಗಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರತಿ 5 ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರೆ ಬರುವ ಜೂನ್ 22 ರಿಂದ 9 ದಿನಗಳವರೆಗೆ ನಡೆಯಬೇಕಾಗಿತ್ತು. ಆದರೆ, ಕರೊನಾ ವೈರಸ್ ಹಾವಳಿಯಿಂದ ಮತ್ತು ಸರಕಾರದ ನಿರ್ದೇಶನದ ಮೇರೆಗೆ 2022ರ ವರೆಗೆ ಜಾತ್ರೆ ಮುಂದೂಡಲಾಗಿದೆ. ಜಾರಕಿಹೊಳಿ ಸಹೋದರರು, ವ್ಯಾಪಾರಸ್ಥರು, ಮುಖಂಡರು, ನಗರಸಭಾ ಸದಸ್ಯರು ಸೇರಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ಮುಖಂಡರಾದ ಎಸ್.ಎ ಕೊತವಾಲ್ ಮತ್ತು ಸಿದ್ದಲಿಂಗ ದಳವಾಯಿ ತಿಳಿಸಿದರು. ಪ್ರಭಾಕರ ಚವ್ಹಾಣ, ಅಶೋಕ ಪಾಟೀಲ, ಅಡಿವೆಪ್ಪ ಕಿತ್ತೂರು, ರಾಜು ಪವಾರ, ಅಶೋಕ ತಕ್ಕಾರ, ಅಶೋಕ ಹೆಗ್ಗನವರ, ಜ್ಯೋತಿಬಾ ಸುಭಂಜಿ, ಪ್ರಲ್ಹಾದ ಜೋಶಿ, ನಟರಾಜ ಮುತಾಲಿಕ್ ದೇಸಾಯಿ ಇದ್ದರು.