ಜಿಲ್ಲೆ

ಮಕ್ಕಳ ಭವಿಷ್ಯಕ್ಕೆ ಗ್ರಾಮಸಭೆ ಸಹಕಾರಿ

ಪಿಡಿಒ ಉದಯ ಬೊರಕರ, ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು. ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಬೇಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ 5000 ರೂ. ವಿಶೇಷ ಗೌರವಧನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಗ್ರಾಪಂನಿಂದ ವಿಶೇಷ ಕಲಿಕಾ ಪರಿಕರ ಕೊಡುಗೆ ನೀಡಲಾಯಿತು. 

ಸದಸ್ಯೆ ಬೇಬಿ ಮಾರುತಿ ನಾಯ್ಕ ಮಾತನಾಡಿ, ಮಕ್ಕಳು ಮುಕ್ತವಾಗಿ ತಮ್ಮ ಆಶಯಗಳನ್ನು ಹೇಳಿಕೊಳ್ಳುವ ದೃಷ್ಟಿಯಿಂದ ಗ್ರಾಮಸಭೆ ನಡೆಸಲಾಗುತ್ತಿದೆ. ಆ ಮೂಲಕ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಈ ಗ್ರಾಮಸಭೆ ಸಹಕಾರಿಯಾಗಿದೆ ಎಂದರು.

ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದುರ್ಗದಾಸ ದೇವಪ್ಪ ಮೊಗೇರ ಮಾತನಾಡಿ, ಮಕ್ಕಳ ಗ್ರಾಮಸಭೆಯ ಮಹತ್ವ, ಹಿನ್ನೆಲೆ ತಿಳಿಸಿಕೊಟ್ಟರು.

ಶಾರದಹೊಳೆಯ ಸ.ಹಿ.ಪ್ರಾ ಶಾಲೆ ವಿದ್ಯಾರ್ಥಿನಿ ಜನನಿ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಣಬಾವಿ ಸ.ಹಿ.ಪ್ರಾ ಶಾಲೆ ವಿದ್ಯಾರ್ಥಿನಿ  ಲಹರಿ ದುರ್ಗಾದಾಸ ಮೊಗೇರ ಕಾರ್ಯಕ್ರಮ ಉದ್ಘಾಟಿಸಿದರು.

ಭಟ್ಕಳ: ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಅಂಗವಾಗಿ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತೀಚೆಗೆ ಮಕ್ಕಳ ವಿಶೇಷ ಗ್ರಾಮಸಭೆ ಏರ್ಪಡಿಸಲಾಗಿತ್ತು.