ಜಿಲ್ಲೆ

ಮುದಿಗೆರೆಯಲ್ಲಿ ಗ್ರಾಪಂ ಕಾರ್ಯಾರಂಭ

ಕೋಲಾರ ಡೆಸ್ಕ್

ಮುಳಬಾಗಿಲು: ಸ್ಥಳಾಂತರವಾದ ಕಚೇರಿ ಪುನ@ ಮುದಿಗೆರೆಯಲ್ಲೆ ತೆರೆಯಬೇಕು ಎಂದು ಒತ್ತಾಯಿಸಿ ಮುದಿಗೆರೆ ಗ್ರಾಮಸ್ಥರು ಹಾಗೂ ನಾನಾ ದಲಿತ ಸಂಟನೆಗಳುತಾಲೂಕು ಪಂಚಾಯತಿ ಕಚೇರಿಯ ಆವರಣದಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದ್ದರಿಂದ ಗುರುವಾರ ತಾಪಂ ಇಒ ಡಾ.ಕೆ.ಸರ್ವೇಶ್​ ನೇತೃತ್ವದಲ್ಲಿ ಮುದಿಗೆರೆಯಲ್ಲಿನ ಸಮುದಾಯ ಭವನದಲ್ಲಿ ಗಣಕಯಂತ್ರ ಇಟ್ಟು ಪೂಜೆ ಮಾಡುವ ಮೂಲಕ ಪಂಚಾಯಿತಿ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ತಾಲೂಕಿನ ಗಡ್ಡೂರಿನಲ್ಲಿರುವ ಪಂಚಾಯಿತಿ ಕಚೇರಿಯನ್ನು ಮುದಿಗೆರೆ ಗ್ರಾಮಕ್ಕೆ ವರ್ಗಾಯಿಸಬೇಕು ಎಂದು ಕಳೆದ 18 ದಿನಗಳಿಂದ ಗ್ರಾಮಸ್ಥರು ಹಾಗೂ ದಲಿತ ಸಂಟನೆಗಳು ತಾಪಂ ಮುಂದೆ ಅಹೋರಾತ್ರಿ ನಡೆಸಿದ್ದದ್ದ ಪ್ರತಿಲವಾಗಿ ಗ್ರಾಪಂ ಮುದಿಗೆರೆಯಲ್ಲೇ ಕಾರ್ಯಾರಂಭ ಮಾಡುವಂತಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್​ ಮಾತನಾಡಿ, ಸದ್ಯಕ್ಕೆ ಗಡ್ಡೂರಿನಲ್ಲಿ ಪಂಚಾಯತಿ ವ್ಯವಹಾರಗಳು ನಡೆಯಲಿದೆ. ಎಲ್ಲ ಸಾಮಾನ್ಯ ಸಭೆಗಳು ಮುದಿಗೆರೆಯಲ್ಲೇ ನಡೆಯಲಿವೆ ಎಂಬ ಒಪ್ಪಂದದ ಮೇಲೆ ಮುದಿಗೆರೆಯ ಸಮುದಾಯ ಭವನದಲ್ಲಿ ಪಂಚಾಯಿತಿಯ ಕಾರ್ಯಾರಂಭಕ್ಕೆ ಪೂಜೆ ನಡೆಸಲಾಗಿದೆ. 18 ದಿನಗಳಿಂದ ಗ್ರಾಮಸ್ಥರು ಹಾಗೂ ದಲಿತ ಸಂಟನೆಗಳು ಪ್ರತಿಭಟನೆ ಮಾಡಿದ ಫಲವಾಗಿ ಮತ್ತೆ ಮುದಿಗೆರೆಯಲ್ಲಿ ಪ್ರಾರಂಭವಾಗಿದೆ ಎಂದರು.

ದಲಿತ ಮುಖಂಡ ಸಂಗಸಂದ್ರ ಎನ್​. ವಿಜಯ ಕುಮಾರ್​ ಮಾತನಾಡಿ, ತಾತ್ಕಾಲಿಕವಾಗಿ ಪ್ರತಿಭಟನೆಗೆ ನ್ಯಾಯ ಸಿಕ್ಕಿದ್ದು, ಮುಂದೆ ಗಡ್ಡೂರಿನಿಂದ ಶಾಶ್ವತವಾಗಿ ಮುದಿಗೆರೆಗೆ ಪಂಚಾಯತಿ ಸ್ಥಳಾಂತರವಾಗುತ್ತದೆ ಎಂದು ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಗಡ್ಡೂರು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಇದಕ್ಕೂ ಮುಂದೆ ಕೇವಲ ಪರಿಶಿಷ್ಟ ಜಾತಿಯ ಜನಾಂಗದವರೇ ಹೆಚ್ಚಿರುವ ಮುದಿಗೆರೆಯಲ್ಲೇ ಇತ್ತು.ಆದರೆ ಕೆಲವರ ಕಾರಣದಿಂದ ಕಚೇರಿ ಗಡ್ಡೂರಿಗೆ ಸ್ಥಳಾಂತರವಾಯಿತು. ಈಗ ಪುನ@ ಮೂಲ ಸ್ಥಾನಕ್ಕೆ ಗ್ರಾಪಂ ಕಚೇರಿ ವಾಪಸ್​ ಬಂದಿದ್ದರಿಂದ ಗ್ರಾಮಸ್ಥರು ಹಾಗೂ ದಲಿತಪರ ಸಂಟನೆಗಳಲ್ಲಿ ಸಂಭ್ರಮದ ವಾತಾವರಣ ಮೂಡಿದೆ ಎಂದು ಮುಖಂಡ ಮೆಕಾನಿಕ್​ ಜಿ. ಶ್ರೀನಿವಾಸ್​ ತಿಳಿಸಿದರು.

ಪ್ರತಿಭಟನೆ ವಾಪಸ್​

ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಕಚೇರಿ ವ್ಯವಹಾರಗಳನ್ನು ಗಡ್ಡೂರು ಹಾಗೂ ಮುದಿಗೆರೆ ಎರಡೂ ಗ್ರಾಮಗಳಲ್ಲಿ ವ್ಯವಹರಿಸುವಂತೆ ಹಾಗೂ ವಿಶೇಷ ಸಾಮಾನ್ಯ ಸಭೆಗಳನ್ನು ಮುದಿಗೆರೆ ಗ್ರಾಮದಲ್ಲೆ ನಡೆಸುವಂತೆ ಸೂಚಿಸಿರುವ ಪರಿಣಾಮವಾಗಿ ಜಿಲ್ಲಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಗುರುವಾರ ಪ್ರತಿಭಟನೆ ವಾಪಸ್​ ಪಡೆಯಲಾಗಿದೆ ಎಂದುಪ್ರತಿಭಟನಾ ಕಾರರು ಹೇಳಿದರು.