ರಾಮದುರ್ಗ: ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ನೌಕರರ 7ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಹಲವು ಬೇಡಿಕೆ ಈಡೇರಿವೆ. ಇನ್ನುಳಿದ ಬೇಡಿಕೆಗಳ ಬಗ್ಗೆ ಮುಖಂಡರ ಜತೆ ಮಾತನಾಡಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಂಟನೆ ಜಿಲ್ಲಾಧ್ಯ ಜಿ.ಎಂ.ಜೈನೆಖಾನ್ ಮಾತನಾಡಿ, ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಪಂಚಾಯಿತಿ ನೌಕರರು ಇಡೀ ರಾಜ್ಯದಲ್ಲಿ ಸಂಟಿಸಿ ನಿರಂತರ ಹೋರಾಟ ಮಾಡಿದ್ದರ ಲವಾಗಿ ಪಂಚಾಯಿತಿ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ಸೇರಿಸಿ ವೇತನ ನೀಡಲಾಗುತ್ತಿದೆ. ಮೊದಲು ತೆರಿಗೆ ವಸೂಲಿ ಮಾಡಿ ವೇತನ ಪಡೆಯುತ್ತಿದ್ದೇವು. ಈಗ ಸರ್ಕಾರದ ನಿಧಿಯಿಂದ ವೇತನ ಪಡೆಯುತ್ತಿರುವುದು ಹೋರಾಟಕ್ಕೆ ಸಿಕ್ಕ ಜಯ. ಪಿಂಚಣಿಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ನೌಕರ ಸಂದ ಅಧ್ಯ ದಿಲೀಪ ಬೋವಿ, ಮುಖಂಡ ನಾಗಪ್ಪ ಸಂಗೊಳ್ಳಿ ಮಾತನಾಡಿದರು. ಗ್ರಾಮ ಪಂಚಾಯಿತಿ ನೌಕರ ಸಂದ ತಾಲೂಕು ಸಮಿತಿ ರಚನೆ ಮಾಡಲಾಯಿತು. ಅಧ್ಯರಾಗಿ ದಿಲೀಪ್ ಬೋವಿ, ಕಾರ್ಯದರ್ಶಿಯಾಗಿ ಕೇಶವ ದಾಸರ, ಖಜಾಂಚಿಯಾಗಿ ರಮೇಶ ತಿಗಡಿ ಸೇರಿ 21 ಜನರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ನೌಕರ ಸಂದ ತಾಲೂಕು ಅಧ್ಯೆ ಸರಸ್ವತಿ ಮಾಳಶೆಟ್ಟಿ, ಕೇಶವ ದಾಸರ ಇತರರಿದ್ದರು.