ಸಾಗರ: ಗ್ರಾಪಂ ಚುನಾವಣೆ ಮತಪತ್ರ ಬಳಸಲಾಗುತ್ತಿದ್ದು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಾಗರ ಚುನಾವಣಾ ಶಿರಸ್ತೇದಾರ್ ಪ್ರವೀಣ್ ಫರ್ನಾಂಡಿಸ್ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಪೆಟ್ಟಿಗೆಗಳ ಸಿದ್ಧತೆಯನ್ನು ಶನಿವಾರ ಪರಿಶೀಲಿಸಿ ಮಾತನಾಡಿದ ಅವರು, ಚುನಾವಣೆಗಾಗಿ ನಿಯೋಜಿಸಿರುವ ಅಧಿಕಾರಿಗಳ ಸಭೆ ಕರೆದು ಅವರಿಗೆ ಎಲ್ಲ ವಿವರ ನೀಡಲಾಗಿದೆ. ಡಿ.21ರಂದು ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಎಲ್ಬಿ ಕಾಲೇಜಿನಲ್ಲಿ ತರಬೇತಿ ನೀಡಲಾಗá-ವುದು ಎಂದರá-.
ಮಾದರಿ ನೀತಿಸಂಹಿತೆ ಮತ್ತು ಸದಾಚಾರ ಸಂಹಿತೆ ಮುಖ್ಯಸ್ಥರಾದ ತಾಪಂ ಇಒ ಮಾರ್ಗದರ್ಶನದಲ್ಲಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ತಾಲೂಕಿನಲ್ಲಿ 70 ಸೂಕ್ಷ್ಮ ಮತ್ತು ಮಾಲ್ವೆ, ಪಡವಗೋಡು, ಮಾಸೂರು ಪೇಟೆ, ಕೊರ್ಲಿಕೊಪ್ಪ, ಭೀಮನೇರಿ, ನೆಲಹರಿ, ತಾಳಗುಪ್ಪ ಇವುಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸಲಾಗá-ವುದು ಎಂದು ಮಾಹಿತಿ ನೀಡಿದರು.