ಕುಕನೂರು ತಾಲೂಕಿನ ತಳಬಾಳದಲ್ಲಿ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಗ್ರಾಪಂ ಪಿಡಿಒ ಅಡಿವೆಪ್ಪ ಯಡಿಯಾಪುರ ಮಾತನಾಡಿದರು. ತಾಪಂ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಪಂ ಉಪಾಧ್ಯಕ್ಷೆ ಮಹಾದೇವಿ ಭೀಮಯ್ಯ ಸಸಿ, ಸದಸ್ಯರಾದ ದೇವೇಂದ್ರಪ್ಪ ಕಮ್ಮಾರ, ಪಿಡಿಒ ಎಲ್.ರವಿಕುಮಾರ ಇದ್ದರು. 
ಜಿಲ್ಲೆ

ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ;ಗ್ರಾಪಂ ಪಿಡಿಒ ಅಡಿವೆಪ್ಪ ಯಡಿಯಾಪುರ ಸಲಹೆ

Gangavati - Mohan Kumar H R

ಕುಕನೂರು: ಕಾಯಿಲೆ ಕುರಿತು ತಿರಸ್ಕಾರ ಮನೋಭಾವ ಮಾಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಭಾನಾಪುರ ಗ್ರಾಪಂ ಪಿಡಿಒ ಅಡಿವೆಪ್ಪ ಯಡಿಯಾಪುರ ಹೇಳಿದರು.

ತಾಲೂಕಿನ ತಳಬಾಳದಲ್ಲಿ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಸಣ್ಣ ಕಾಯಿಲೆಗಳಿಗೆ ಅಂಗಡಿಗಳಲ್ಲಿ ದೊರಕುವ ಔಷಧಿಗಳನ್ನು ಸೇವಿಸಲು ಜನರು ಮುಂದಾಗುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅದರ ಬದಲಾಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಸರ್ಕಾರ ಕಾಮಗಾರಿ ಸ್ಥಳದಲ್ಲಿಯೇ ಕೂಲಿಕಾರರ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಪಂ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಪಂ ಉಪಾಧ್ಯಕ್ಷೆ ಮಹಾದೇವಿ ಭೀಮಯ್ಯ ಸಸಿ, ಸದಸ್ಯರಾದ ದೇವೇಂದ್ರಪ್ಪ ಕಮ್ಮಾರ, ಪಿಡಿಒ ಎಲ್.ರವಿಕುಮಾರ, ಆರೋಗ್ಯ ಇಲಾಖೆ ಅಧಿಕಾರಿ ಪ್ರತಿಭಾ, ನರೇಗಾ ಸಹಾಯಕ ಬಸವರಾಜ, ಕಾಯಕ ಬಂಧು ಶಶಿ ಇತರರಿದ್ದರು.