ಜಿಲ್ಲೆ

ಇಗ್ನೋ ವಿವಿಯಲ್ಲಿ ಪದವಿ, ಉನ್ನತ ಶಿಕ್ಷಣ ಪ್ರಾರಂಭ

ಶಿವಮೊಗ್ಗ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ಪ್ರಸಕ್ತ 2025ರ ಅವಧಿಯ ಪದವಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಪ್ರವೇಶಕ್ಕೆ ಆ.15 ಕೊನೆಯ ದಿನವಾಗಿದೆ ಎಂದು ಸಂಯೋಜನಾಧಿಕಾರಿ ಎನ್.ಕುಮಾರಸ್ವಾಮಿ ಹೇಳಿದರು.

ಈ ವರ್ಷವೂ ಇಗ್ನೋ ಮುಕ್ತ ವಿವಿಯು ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎ, ಎಂಸಿಎ, ಎಂಎಸ್ಸಿ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಸೇರಿ 315 ಕೋರ್ಸ್‌ಗಳ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿನ ಅಧ್ಯಯನ ಕೇಂದ್ರವು ಈ ಎಲ್ಲ ಕೋರ್ಸ್‌ಗಳು ಉದ್ಯೋಗದಲ್ಲಿರುವವರಿಗೆ ಪಡೆಯಲು ಅನುಕೂಲವಾಗಲಿದೆ. ಇಗ್ನೋದ ಎಲ್ಲ ಕೋರ್ಸ್‌ಗಳನ್ನು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ ಪಡೆಯಬಹುದು. ಈ ವ್ಯಾಪ್ತಿಯ ಉದ್ಯೋಗಸ್ಥರು, ರೆಗ್ಯೂಲರ್ ತರಗತಿಗೆ ಪ್ರವೇಶ ಪಡೆಯಲು ಆಗದವರು ಇಲ್ಲಿ ತಮ್ಮ ವ್ಯಾಸಂಗ ಮುಂದುವರಿಸಬಹುದು ಎಂದರು.

ಪರೀಕ್ಷಾ ಶುಲ್ಕ, ಪ್ರವೇಶ ಇತ್ಯಾದಿ ಹೆಚ್ಚಿನ ವಿವರಗಳಿಗೆ ಇಗ್ನೋ ಜಾಲತಾಣವನ್ನು ಸಂಪರ್ಕಿಸಬಹುದು. ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಯನ ಕೇಂದ್ರಕ್ಕೆ ನೇರವಾಗಿ ವಿಚಾರಿಸಬಹುದು ಎಂದರು. ಅಧ್ಯಯನ ಕೇಂದ್ರದ ರಾಜೀವ್ ಹಾಗೂ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.