ದೇವನಹಳ್ಳಿಯಲ್ಲಿ ಬನಶಂಕರಿ ಐಟಿಐನ ವಾರ್ಷಿಕ ಹಾಗೂ ಗ್ರಾಜುಯೇಷನ್ ಡೇಯನ್ನು ಗಣ್ಯರು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಚೇರ್‌ಮನ್ ಡಿ.ವೆಂಕಟೇಶ್ಇದ್ದರು. 
ಜಿಲ್ಲೆ

ಐಟಿಐನಲ್ಲಿದೆ ಉತ್ತಮ ಭವಿಷ್ಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಐಟಿಐ ತರಬೇತಿ ಪಡೆದವರಿಗೆ ಉತ್ತಮ ಭವಿಷ್ಯವಿದೆ. ನೈಪುಣ್ಯಕ್ಕೆ ತಕ್ಕ ಉದ್ಯೋಗವೂ ಖಾತ್ರಿಯಾಗಿ ಸಿಗಲಿದೆ. ಯುವಕ, ಯುವತಿಯರು ಅದರಲ್ಲೂ ವಿದ್ಯಾಭ್ಯಾಸ ಮೊಟಕುಗೊಳಿಸಿ ಮದುವೆಯಾಗಿರುವ ಹೆಣ್ಣು ಮಕ್ಕಳೂ ಐಟಿಐಗೆ ಸೇರಬಹುದು ಎಂದು ಬೆಂಗಳೂರು ವಿಭಾಗದ ಕೈಗಾರಿಕಾ ಮತ್ತು ಉದ್ಯೋಗ ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ವೈಜಗೊಂಡ ಹೇಳಿದರು.
ಪಟ್ಟಣದ ಪರ್ವತಪುರದ ಬನಶಂಕರಿ ಕೈಗಾರಿಕಾ ತರಬೇತಿ ಸಂಸ್ಥೆಯ 2024ನೇ ಸಾಲಿನ ವಾರ್ಷಿಕ ಹಾಗೂ ಗ್ರಾಜುಯೇಷನ್ ಡೇ ಉದ್ಘಾಟಿಸಿ ಮಾತನಾಡಿದರು. ಯುವಕ, ಯುವತಿಯರ ಸ್ವಾವಲಂಬನೆಯ ಜೀವನಕ್ಕೆ ಐಟಿಐ ತರಬೇತಿ ಸಹಕಾರಿಯಾಗಲಿದೆ. ಐಟಿಐ ವಿದ್ಯಾರ್ಥಿ ವಿವೇಕಾನಂದ ಬಳಕೆಯಾಗದ ನಿರುಪಯುಕ್ತ ವಸ್ತುಗಳನ್ನು ಬಳಸಿ ಎಲೆಕ್ಟ್ರಿಕ್ ಬೈಕ್ ಅವಿಷ್ಕರಿಸಿದ್ದು, ಲೋಕಾರ್ಪಣೆ ಮಾಡಿರುವುದೆ ಇದಕ್ಕೆ ನಿದರ್ಶನ. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಪ್ರಾಂಶುಪಾಲ ಪ್ರಕಾಶ್ ನಾಗರಾಜ್ ಮಾತನಾಡಿ, ಕೈಗಾರಿಕಾ ತರಬೇತಿ ಸಂಸ್ಥೆಗಳು ದೇಶದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿವೆ ಎಂದರು.