ಜಿ.ಎಸ್.ಎಸ್.ಎಸ್. ಮಹಿಳಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ ಸಂಭ್ರಮಮೈಸೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ ಹೆಚ್ಚಿಸಿಕೊಳ್ಳಲು ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ತಮ್ಮ ಆಲೋಚನೆ ಹಾಗೂ ನಿರ್ಧಾರಗಳನ್ನು ನಿಯಂತ್ರಿಸುವ ಅಕಾರಿಯನ್ನಾಗಿ ಮಾಡಿಕೊಳ್ಳಬಾರದು ಎಂದು ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವೀಸಸ್ನ ಗ್ಲೋಬಲ್ ಇಂಜಿನಿಯರಿಂಗ್ ಅಕಾಡೆಮಿಯ ಮುಖ್ಯಸ್ಥ ಡಾ. ಪಿ. ಬಿ. ಕೋಟೂರ್ ಡಾ. ಪಿ.ಬಿ. ಕೋಟೂರು ಸಲಹೆ ನೀಡಿದರು.
ನಗರದ ಜಿ.ಎಸ್.ಎಸ್.ಎಸ್. ಮಹಿಳಾ ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಿ.ಎಸ್.ಎಸ್.ಎಸ್. ಮಹಿಳಾ ವಾಸ್ತುಶಿಲ್ಪ ಶಾಲೆಯ 2026ನೇ ಸಾಲಿನ ಬಿ.ಇ. ಮತ್ತು ಬಿ.ಆರ್ಕ್. ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಶನಿವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಐ ತಂತ್ರಜ್ಞಾನ ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಅದರಲ್ಲಿನ ಹೊಸ ಸಾಧ್ಯತೆಗಳನ್ನು ಅರಿತು ಪರಿಣತಿ ಬೆಳೆಸಿಕೊಳ್ಳಬೇಕು. ಆದರೆ ತಂತ್ರಜ್ಞಾನವನ್ನು ವಿವೇಚನೆಯಿಲ್ಲದೆ ಅವಲಂಬಿಸಬಾರದು. ಎಐನಿಂದ ಮಾಹಿತಿ ಮತ್ತು ನೆರವು ಪಡೆಯಬಹುದಾದರೂ, ಅದನ್ನು ಸ್ವತಃ ಆಲೋಚಿಸಿ, ಪರಿಶೀಲಿಸಿ, ಸೂಕ್ತವಾಗಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪದವಿ ಎಂಬುದು ವೃತ್ತಿಜೀವನಕ್ಕೆ ಪ್ರವೇಶ ಕಲ್ಪಿಸುವ ಪಾಸ್ಪೋರ್ಟ್ ಇದ್ದಂತೆ. ಆದರೆ ವೃತ್ತಿಪರ ಬದುಕಿನಲ್ಲಿ ಯಶಸ್ಸು ಸಾಸಲು ಅಗತ್ಯವಾದ ಕೌಶಲ್ಯಗಳೇ ವೀಸಾ ಇದ್ದಂತೆ. ಹೀಗಾಗಿ ಪದವಿ ಪಡೆದಿರುವುದಕ್ಕೆ ಸೀಮಿತವಾಗದೆ, ನಿರಂತರವಾಗಿ ಹೊಸ ಕೌಶಲಗಳನ್ನು ಕಲಿಯಬೇಕು. ತಾಂತ್ರಿಕ ಜ್ಞಾನದ ಜತೆಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೌಲ್ಯಗಳನ್ನು ಮೈಗೂಡಿಸಿಕೊಂಡ ಪ್ರಬುದ್ಧ ಇಂಜಿನಿಯರ್ಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಅನುಪಮಾ ಬಿ. ಪಂಡಿತ್ ಮಾತನಾಡಿ, ಪದವೀಧರರು ಭಾರತೀಯ ವೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸುವ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು ಎಂದರು.
ಮಹಿಳೆಯರ ಸಾಧನೆಗಳನ್ನು ಗೌರವಿಸುವ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಮನೋಭಾವವನ್ನು ಪುರುಷರು ಬೆಳೆಸಿಕೊಳ್ಳಬೇಕು. ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮಾಡಿದ ತ್ಯಾಗ ಮತ್ತು ಪರಿಶ್ರಮವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ವಿಟಿಯು ಪರೀಕ್ಷೆಯಲ್ಲಿ ಏಳನೇ ರ್ಯಾಂಕ್ಗಳಿಸಿದ ಕಂಪ್ಯೂಟರ್ಸ ಸೈನ್ಸ್ ಮತ್ತು ಇಂಜಿನಿಯರಿಂಗ್ (ಎಐ ಮತ್ತು ಎಂಎಲ್) ವಿಭಾಗದ ವಿದ್ಯಾರ್ಥಿನಿ ಬಿ.ಸಿ.ಭುವನಾ ಅವರನ್ನು ಸನ್ಮಾನಿಸಲಾಯಿತು. ಪದವೀಧರರಿಗೆ ಪ್ರಮಾಣಪತ್ರ ವಿತರಿಸುವುದರ ಜತೆಗೆ ಬಿ.ಇ. ಆನರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್. ಗುರುರಾಜ್ ಪದವಿ ಪ್ರದಾನ ಪ್ರಮಾಣವಚನ ಬೋಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ. ಶಿವಕುಮಾರ್ ಇದ್ದರು.