ಇಂಡಿ ಪಟ್ಟಣದ ಆಡಳಿತ ಸೌಧ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಧನಪಾಲಶೇಟಿ ದೇವೂರ ಮಾತನಾಡಿದರು. ಮಾಂತೇಶ ಹಂಗರಗಿ, ರತನಕುಮಾರ ಜೀರಗಿಹಾಳ, ಉಮೇಶ ಲಮಾಣಿ ಇತರರಿದ್ದರು. 
ಜಿಲ್ಲೆ

17 ರಂದು ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ

ಇಂಡಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಧನಪಾಲಶೇಟಿ ದೇವೂರ ಹೇಳಿದರು.

ಪಟ್ಟಣದ ಆಡಳಿತ ಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಸೇರಿ ವಿವಿಧ ಮಹನೀಯರ ಜಯಂತಿ ವಿಜೃಂಭಣೆಯಿಂದ ಮಾಡುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಜಯಂತಿ ಆಚರಣೆಗೆ ಗೌರವ ಬರಲಿದೆ ಎಂದರು.

ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಅರ್ಜುನ ನಾಯ್ಕೋಡಿ ಮಾತನಾಡಿ, ಸ್ತ್ರೀ-ಪುರುಷ ಸರಿಸಮಾನತೆಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವೆರು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿ ಬೋಧಿಸಿದ್ದಾರೆ. ಅದನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.

ಅ.17ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಮುದಾಯದ ಮುಖಂಡರು ಶ್ರಮಿಸಬೇಕು. ಬೆಳಗ್ಗೆ 8ಕ್ಕೆ ಆಡಳಿತ ಸೌಧದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಪಟ್ಟಣದ ವಿಜಯಪುರ ರಸ್ತೆಯಲ್ಲಿರವ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಹಂಗರಗಿ, ಶಹರ ಸಿಪಿಐ ರತನಕುಮಾರ ಜೀರಗಿಹಾಳ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಬಿ.ಎ. ರಾವೂರ, ಸಮುದಾಯದ ಮುಖಂಡರಾದ ನಿಂಬಾಳ ಗ್ರಾಪಂ ಅಧ್ಯಕೆ ಲಕ್ಷ್ಮೀಬಾಯಿ ನಾಯ್ಕೋಡಿ, ರಾಜಕುಮಾರ ನಾಯ್ಕೋಡಿ, ನಾಗಪ್ಪ ನಾಯ್ಕೋಡಿ, ಸಂಜು ನಾಯ್ಕೋಡಿ, ಮುಕ್ಕುಂದ ಬೇಡರ, ಗಂಗಾಧರ ನಾಯ್ಕೋಡಿ, ಸತೀಶ ಹಿಪ್ಪರಗಿ, ರವಿ ನಾಯ್ಕೋಡಿ, ಅರ್ಜುನ ನಾಯ್ಕೋಡಿ (ಬಳ್ಳೋಳ್ಳಿ), ಮಹಾದೇವ ವಾಲಿಕಾರ, ಚಂದ್ರು ಹೊಸಮನಿ, ಬಾಬು ಗುಡುಮಿ ಇತರರಿದ್ದರು.