ಜಿಲ್ಲೆ

ಪುರದ ಮಾರಮ್ಮ ಆರಾಧನಾ ಮಹೋತ್ಸವ

ಎ. ಆರ್. ರಘುರಾಮ

ಗುಂಡ್ಲುಪೇಟೆ: ತಾಲೂಕಿನ ತೊಂಡವಾಡಿ ಗ್ರಾಮದ ಪುರದ ಮಾರಮ್ಮನವರ ದೇವಾಲಯದಲ್ಲಿ 11 ನೇ ವರ್ಷದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ಗ್ರಾಮದ ಎಲ್ಲ ಮನೆಗಳನ್ನೂ ಶುಚಿಗೊಳಿಸಿ ಬೀದಿಗಳಲ್ಲಿ ತಳಿರು, ತೋರಣ ಕಟ್ಟಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸೋಮವಾರ ರಾತ್ರಿ ಜಾನಪದ ಕಲಾವಿದ ಡಾ. ಮೈಸೂರು ಗುರುರಾಜ್ ಅವರಿಂದ ಹರಿಕಥಾ ಕಾಲಕ್ಷೇಪ ಆಯೋಜಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಅಭಿಷೇಕ ಪೂಜೆ, ಪೂರ್ಣಾಹುತಿ ನಂತರ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿತು. ಮಂಗಳವಾದ್ಯಗಳು, ಸತ್ತಿಗೆ ಸುರಾಪಾಣಿ ಮುಂತಾದ ಕಲಾ ತಂಡಗಳ ಜತೆಗೆ ಪುರದ ಮಾರಮ್ಮನವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.