ಜಿಲ್ಲೆ

ಆಭರಣ ಕಳವು ಆರೋಪಿ ಬಂಧನ

ಎ. ಆರ್. ರಘುರಾಮ

ಗುಂಡ್ಲುಪೇಟೆ : ತಾಲೂಕಿನ ಬೇಗೂರು ಗ್ರಾಮದಲ್ಲಿ ಕಾರಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಜೂ. 23ರಂದು ಮೈಸೂರಿನ ಶಿಲ್ಪಾ ಎಂಬವರು ತಮ್ಮ ಪತಿ ಜಯರಾಂ ಹಾಗೂ ಸಹಾಯಕರಾದ ಮಂಜುನಾಥ್ ಮತ್ತು ಗಿರಿ ಅವರೊಂದಿಗೆ ಕೇರಳಕ್ಕೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೇಗೂರು ಗ್ರಾಮದ ಬಸ್ ನಿಲ್ದಾಣದ ಎದುರಿನ

ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ತಮ್ಮೊಡನೆ ತಂದಿದ್ದ 210 ಗ್ರಾಂ ಚಿನ್ನಾಭರಣಗಳನ್ನು ಕಾರಿನಲ್ಲೇ ಇರಿಸಿದ್ದರು.

ಈ ಸಂದರ್ಭ ಆರೋಪಿಗಳಾದ ಮಂಜುನಾಥ್ ಮತ್ತು ಗಿರಿ ಇಬ್ಬರೂ ಸೇರಿ ಕಾರಿನಲ್ಲಿದ್ದ ಆಭರಣಗಳನ್ನು ಕದ್ದು ಬಸ್ಸಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಮತ್ತು ಆಭರಣಗಳ ಪತ್ತೆಗೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾರ್ಗದರ್ಶನದಲ್ಲಿ ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು, ಸಬ್‌ಇನ್ಸ್‌ಪೆಕ್ಟರುಗಳಾದ ನವೀನ್, ಲೋಕೇಶ್ ಮತ್ತು ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.ತನಿಖೆ ಸಂದರ್ಭ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆ. 5ರಂದು ಮಂಜುನಾಥನನ್ನು ದೊಡ್ಡಬಳ್ಳಾಪುರದಲ್ಲಿ ಹಾಗೂ ಗಿರಿಯನ್ನು ಮೈಸೂರು ಸಮೀಪದ ದೇವಲಾಪುರದಲ್ಲಿ ಬಂಧಿಸಿ, ಕದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಮುಖ್ಯಪೇದೆಗಳಾದ ಜಿ.ಎನ್.ಪುಟ್ಟರಾಜು, ಅಜಿತ್‌ಕುಮಾರ್, ದಿವಾಕರ್, ಸಿಬ್ಬಂದ್ದಿ ಶಂಕರಲಿಂಗೇಗೌಡ, ಸಚಿನ್, ರಾಜು, ಚಾಲಕರಾದ ಶಿವಕುಮಾರ್ ಹಾಗೂ ಹರೀಶ್ ಭಾಗವಹಿಸಿದ್ದರು.