ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶನಿವಾರ ಮಲ್ಲಯ್ಯನಪುರ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿ, ಟೇಬಲ್, ನೆಲಹಾಸು ಹಾಗೂ ಬೆಡ್ ಶೀಟ್‌ಗಳನ್ನು ವಿತರಣೆ ಮಾಡಲಾಯಿತು. ಪಿಡಿಒ ಕುಮಾರಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ರಾಜೇಗೌಡ, ರಮೇಶ್, ರಾಜೇಶ್ವರಿ, ಬಿಲ್ ಕಲೆಕ್ಟರ್ ಸುರೇಶ್, ಡೇಟಾ ಎಂಟ್ರಿ ಆಪರೇಟರ್ ಕರಿಗೌಡ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಧಾ, ಸಹಾಯಕಿ ಮಹದೇವಮ್ಮ ಇತರರು ಇದ್ದರು.