ಜಿಲ್ಲೆ

ಗ್ರಾಪಂ ಕಾರ್ಯದರ್ಶಿ ಲೋಕಾ ಬಲೆಗೆ

ರಮೇಶ ಮೇಳಕುಂದಾ

ಕಲಬುರಗಿ: ಪ್ಲಾಟ್‌ಗಳ ಮ್ಯುಟೇಷನ್ ಮಾಡಿಕೊಡಲು ೨೦ ಸಾವಿರ ರೂ. ಲಂಚ ಬೇಡಿಕೆ ಇಟ್ಟ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ಮರತೂರ ಗ್ರಾಪಂ ಕಾರ್ಯದರ್ಶಿ ಅಶೋಕ ಪಡಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದವ.

ಶ್ರೀನಿವಾಸ ಸರಡಗಿ ಗ್ರಾಮದ ವಿಜಯಕುಮಾರ ರಾಠೋಡ್ ಅವರು ಶಹಾಬಾದ್ ತಾಲೂಕಿನ ಮರತೂರ ಗ್ರಾಪಂ ವ್ಯಾಪ್ತಿಯಲ್ಲಿನ ಅಲ್ದಿಹಾಳ ಗ್ರಾಮದಲ್ಲಿ ಎರಡು ಪ್ಲಾಟ್‌ಗಳನ್ನು ಖರೀದಿಸಿದ್ದು, ಚಿತ್ತಾಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ನಿವೇಶನಗಳ ಖಾತೆ ಮಾಡಿಸಲು ಮರತೂರ ಗ್ರಾ.ಪಂ.ಗೆ ಅಗತ್ಯ ದಾಖಲೆ ಸಲ್ಲಿಸಿದ್ದರು. ವಿಜಯಕುಮಾರಗೆ ಕೆಲಸದ ನಿಮಿತ್ತ ಮರತೂರಿಗೆ ಬರಲು ಆಗದಕ್ಕೆ ನಿವೇಶನಗಳ ಖಾತೆ ಹೊಣೆಗಾರಿಕೆಯನ್ನು ತಮ್ಮ ಸಂಬಂಧಿ ಪರಶುರಾಮ ಅವರಿಗೆ ವಹಿಸಿದ್ದರು. ಮುಟೇಶನï ಮಾಡಿಕೊಡಲು ಕಾರ್ಯದರ್ಶಿ ಅಶೋಕ ಪಡಶೆಟ್ಟಿ ೨೦ ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದದರು.

ಲಂಚ ಬೇಡಿಕೆ ಹಿನ್ನೆಲೆಯಲ್ಲಿ ಪರಶುರಾಮ ಲೋಕಾಯುಕ್ತರಿಗೆ ದೂರು ನೀಡಿದ್ದು, ಅಧಿಕಾರಿಗಳು ನಗರದ ಲಾಲಗೇರಿ ಕ್ರಾಸ್‌ಬಳಿಯ ಹೊಟೇಲ್ ಒಂದರಲ್ಲಿ ಮಂಗಳವಾರ ೨೦ ಸಾವಿರ ರೂ. ಪಡೆಯುವಾಗ ದಾಳಿ ನಡೆಸಿ, ತಪಾಸಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯಿಂದ ೨೦ ಸಾವಿರ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಲೋಕಾಯುಕ್ತ ಅಧೀಕ್ಷಕ ಆ್ಯಂಟನಿ ಜಾನ್​ ಜೆಕೆ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಡಿವೈಎಸ್‌ಪಿ ಗೀತಾ ಬೇನಹಾಳ, ಪಿಐ ಅಕ್ಕಮಹಾದೇವಿ ಹಾಗೂ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.