ಚಿತ್ರದುರ್ಗ: ಇ-ಸ್ವತ್ತಿಗೆ ಲಂಚ ಕೇಳಿದ್ದ ಗ್ರಾಪಂ ಪಿಡಿಒ,ಎಸ್‌ಡಿಎ ಲೋಕಾಯುಕ್ತ ಪೊಲೀಸರ ಬಲೆಗೆ ಶುಕ್ರವಾರ ಬಿದ್ದಿದ್ದಾರೆ. ಆರೋಪಿತರಾದ ಹೊ ಳಲ್ಕೆರೆ ತಾಲೂಕು ಅಂದನೂರು ಗ್ರಾಪಂ ಪಿಡಿಒ ಶಿವಕುಮಾರ್ ಹಾಗೂ ಎಸ್‌ಡಿಎ ಸೋನಾ ಅವರನ್ನು ಲೋಕಾಯುಕ್ತ ಪೊಲೀಸರು ಬಂ ಧಿಸಿ,ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹೊಳಲ್ಕೆರೆ ತಾಲೂಕು ಗಂಜಿಕಟ್ಟೆ ಲಂಬಾಣಿಹಟ್ಟಿ ಗ್ರಾಮದ ಜಿ.ಸಿ.ತಿಪ್ಪೇಸ್ವಾಮಿ,ತನ್ನ ಪಾಲಿಗೆ ಬಂದಿದ್ದ ಮನೆಯನ್ನು ಪತ್ನಿ ಹೆಸರಿಗೆ ಖಾತೆ ಮಾಡಿಸಿದ್ದರು.ಇದರ ಇ-ಸ್ವತ್ತಿಗಾಗಿ ಗ್ರಾಪಂಗೆ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಇ-ಸ್ವತ್ತು ಮಾಡಿಕೊಡಲು ಆರೋಪಿತರು 8 ಸಾವಿರ ರೂ.ಲಂಚ ಕೇಳಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ದೂರಿದ್ದು,ಲಂಚ ಸ್ವೀಕರಿಸುವ ವೇಳೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಕಾರ‌್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಜಿ.ಮಂಜುನಾಥ್,ಪಿಐ ಬಿ.ಕೆ.ಲತಾ ಮತ್ತವರ ಸಿಬ್ಬಂದಿ ಭಾಗವಹಿಸಿದ್ದರು. ಪಿಐ ವೈ.ಎಸ್. ಶಿಲ್ಪಾ ಪ್ರಕರಣ ದಾಖಲಿಸಿ,ತನಿಖೆ ಮುಂದುವರಿಸಿದ್ದಾರೆ.