ಮಳೆಯಿಂದ ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಆನಂದಪುರ ಸಮೀಪದ ನೇದರವಳ್ಳಿ ಗ್ರಾಮದ ರವಿ ಅವರ ಕುಟುಂಬಕ್ಕೆ ಹೊಸೂರು ಗ್ರಾಪಂನಿಂದ ನೆರವು ನೀಡಲಾಯಿತು. ಶರತ್ ನಾಗಪ್ಪ, ಚೌಡಪ್ಪ, ಹರೀಶ್ ಗೌಡ, ರಾಜು ಇತರರಿದ್ದರು.  
ಜಿಲ್ಲೆ

ಸಂತ್ರಸ್ತ ಕುಟುಂಬಕ್ಕೆ ಗ್ರಾಪಂ ನೆರವು

ಆನಂದಪುರ: ಸತತ ಮಳೆಯಿಂದ ಮನೆ ಕುಸಿದು ಸಂಕಷ್ಟಕ್ಕೆ ಒಳಗಾಗಿದ್ದ ಇಲ್ಲಿಗೆ ಸಮೀಪದ ನೇದರವಳ್ಳಿ ಗ್ರಾಮದ ರವಿ ಎಂಬುವರ ಕುಟುಂಬಕ್ಕೆ ಹೊಸೂರು ಗ್ರಾಪಂನಿಂದ ಬುಧವಾರ ಆಹಾರ ಕಿಟ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಶರತ್ ನಾಗಪ್ಪ ವೈಯಕ್ತಿಕವಾಗಿ ಧನ ಸಹಾಯ ಮಾಡಿ, ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಚೌಡಪ್ಪ, ಹರೀಶ ಗೌಡ, ನಾಗರತ್ನಾ, ಕಾರ್ಯದರ್ಶಿ ರಾಜು ಇತರರಿದ್ದರು.