ಮಡಿಕೇರಿ:
ಕೊಡಗು ಗೌಡ ಸಮಾಜಗಳ ಒಕ್ಕೂಟದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಆನಂದ್ ಕರಂದ್ಲಾಜೆ ಆಯ್ಕೆ ಆಗಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ರಾಜೇಶ್ ತೇನನ, ಕಾರ್ಯದರ್ಶಿಯಾಗಿ ಉದಯ್ ಪೇರಿಯನ, ಖಜಾಂಚಿಯಾಗಿ ನವೀನ್ ಅಂಬೇಕಲ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಕೊಡಪಾಲು ಗಣಪತಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ನಿದೇಶಕರಾಗಿ ಪೇರಿಯನ ಜಯಾನಂದ ಚಿಲ್ಲನ ಗಣಿಪ್ರಸಾದ್, ಕೊಡಗನ ಹರ್ಷ, ಕುಯ್ಯಮುಡಿ ಅಶ್ವಿನಿ ಕುಮಾರ್, ಬೇಕಲ್ ಬಿಪಿನ್, ಪುಳಕಂಡ್ರ ಸುದೀಪ್, ಕುಯ್ಯಮುಡಿ ರಂಜು, ಪಾಣತ್ತಲೆ ಜಗದೀಶ್ ಮಂದಪ್ಪ, ಕೊಂಬಾರನ ರೋಷನ್, ಮೊಟ್ಟನ ಕರುಣ, ಪುದಿಯ ನೆರವನ ರೇವತಿ ರಮೇಶ್ ಹಾಗೂ ಕುಂಬುಗೌಡನ ಜಲಜಾ ವಿನೋದ್ ಆಯ್ಕೆ ಆಗಿದ್ದಾರೆ.
ಇದೇ ವೇಳೆ ನಿಕಟಪೂರ್ವ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರಿಂದ ಆನಂದ್ ಕರಂದ್ಲಾಜೆ ಅಧಿಕಾರಿ ಸ್ವೀಕರಿಸಿದರು.
ನಂತರ ಮಾತನಾಡಿದ ಆನಂದ್ ಕರಂದ್ಲಾಜೆ, 17 ಜನರ ತಂಡ ಸದ್ಯಕ್ಕೆ ಅಧಿಕಾರ ಸ್ವೀಕರಿಸಿದ್ದರೂ ಶೀಘ್ರದಲ್ಲೇ ಹಿರಿಯರ ಸಲಹಾ ಸಮಿತಿ ಮತ್ತು ಉತ್ಸಾಹಿ ಯುವಕರ ಉಪ ಸಮಿತಿಗಳನ್ನು ಒಳಗೊಂಡ 50 ಜನರ ದೊಡ್ಡ ತಂಡ ಕಟ್ಟುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನಾಂಗದ ಅಭಿವೃದ್ಧಿ ಅವಶ್ಯಕವಾಗಿರುವ ಈ ಪರ್ವ ಕಾಲದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು. ಜನಾಂಗ ಮತ್ತು ಸಮಾಜಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಕ್ಕಿನಲ್ಲಿ ಕೆಲಸ ಮಾಡಲು ನಮ್ಮ ತಂಡ ಬಯಸುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.