ಜಿಲ್ಲೆ

ಕರಿಕೆಯಲ್ಲಿ ಗೌಡ ಸಮಾಜದ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕರಿಕೆ ಗೌಡ ಸಮಾಜದ ಸಮುದಾಯ ಬಾಂಧವರ ಸಭೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂತ ನೇತೃತ್ವದಲ್ಲಿ ಭಾನುವಾರ ಕರಿಕೆಯ ಸಹಕಾರ ಸಭಾಂಗಣದಲ್ಲಿ ನಡೆಯಿತು.

ಸಮಾಜ ನಡೆದು ಬಂದ ಹಾದಿ ಮತ್ತು ಮುಂದಿನ ದಿನಗಳ ಅಭಿವೃದ್ಧಿಯ ಚಿಂತನೆ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬಹುದಿನಗಳಿಂದ ನಿರ್ಲಕ್ಷÈಕ್ಕೆ ಒಳಗಾಗಿದ್ದ ಗಡಿ ಭಾಗದಲ್ಲಿನ ಗೌಡ ಸಮಾಜದವರ ಅಭಿವೃದ್ಧಿಗೆ ಕೆಲವು ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಹಾಲಿ ಇರುವ ಸಮಾಜದ ಸಾಮಾಜಿಕ ಜಾಲತಾಣಗಳ ಸಂವಹನ ವೇದಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸೂಚಿಸಲಾಯಿತು. ಸದ್ಯದಲ್ಲೇ ಕರಿಕೆ ಗೌಡ ಸಮಾಜ ವ್ಯಾಪ್ತಿಯ ಮಹಿಳೆಯರ ಗೌಡ ಮಹಿಳಾ ಒಕ್ಕೂಟ ಮತ್ತು ಯುವ ವೇದಿಕೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಸಮಾಜಕ್ಕೆ ಖರೀದಿಗೆ ಲಭ್ಯವಿರುವ ಜಾಗವನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ಕರಿಕೆ ಗೌ ಸಮಾಜದ ಅಧ್ಯಕ್ಷÀ ಕೋಡಿ ಪೊನ್ನಪ್ಪ, ಹಿರಿಯ ರಾದ ಬೇಕಲ್ ಜಯರಾಮ ಗೌಡ, ಗೌಡ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಸಲಹಾ ಸಮಿತಿ ಸದಸ್ಯ ಕೆ.ಆರ್. ವಿದ್ಯಾಧರ್, ಒಕ್ಕೂಟದ ಕಾನೂನು ಸಲಹೆಗಾರ ಕೊಂಬಾರನ ರೋಷನ್, ಕರಿಕೆ ಗೌಡ ಸಮಾಜದ ಉಪಾಧ್ಯಕ್ಷ ಬೇಕಲ್ ದೇವರಾಜ್, ಬೇಕಲ್ ರಮನಾಥ್, ಒಕ್ಕೂಟದ ನಿರ್ದೇಶಕ ಬೇಕಲ್ ಬಿಪಿನ್, ವಕೀಲ ಕೋಡಿ ನಿರ್ಮಲಾನಂದ ಮತ್ತಿತರರು ಇದ್ದರು.