ಜಿಲ್ಲೆ

ಪಿಂಚಣಿ ಪರಿಷ್ಕರಣೆ ಕಾಯ್ದೆಗೆ ವಿರೋಧ: ಸರ್ಕಾರಿ ನಿವೃತ್ತ ನೌಕರರ ಪ್ರತಿಭಟನೆ

ಮಂಡ್ಯ: ಸರ್ಕಾರಿ ನೌಕರರ ಹೊಸ ಪಿಂಚಣಿ ಮತ್ತು ಹಳೇ ಪಿಂಚಣಿಗಳನ್ನು ಪರಿಷ್ಕರಿಸಲು ಲೋಕಸಭೆಯಲ್ಲಿ ಮಂಡಿಸಿರುವ ಕೇಂದ್ರ ಸರ್ಕಾರ ಧೋರಣೆಯನ್ನು ಖಂಡಿಸಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಿವೃತ್ತ ನೌಕರರ ಸಂಘದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಜು.25ರಂದು ಸರ್ಕಾರಿ ನೌಕರರ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ಪರಿಷ್ಕರಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಷಯ ಮಂಡಿಸಿದೆ. ಹಿಂದೆ ಯಾವ ರೀತಿ ಇತ್ತೋ ಅದೇ ಮಾದರಿಯಲ್ಲೇ ಪಿಂಚಣಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಸಿ.ಶಿವಲಿಂಗಯ್ಯ, ರಾಮೇಗೌಡ, ತಿಮ್ಮಯ್ಯ, ಕೆಂಪಯ್ಯ, ಅಂಕೇಗೌಡ, ನರಸಿಂಹೇಗೌಡ, ರಾಜು ಇತರರಿದ್ದರು.