ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ನ್ಯೂ ಕರ್ನಾಟಕ ರೈತಸಂಘ ಮತ್ತು ಸಿಪಿಐ (ಎಂಎಲ್) ಸಂಘಟನೆಗಳ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಸಿಪಿಐ (ಎಂಎಲ್)ಕಾರ್ಯಾಧ್ಯಕ್ಷ ಶೇಖರಯ್ಯ ಗೆಜ್ಜಲಗಟ್ಟಾ, ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲೂಕು ಅಧ್ಯಕ್ಷ ಗೌಸ್‌ಖಾನ್ ಗುಂತಗೋಳ, ಪ್ರಮುಖರಾದ ಆದಪ್ಪ ಗುರುಗುಂಟಾ, ಚನ್ನಬಸವ ಕೋಠಾ, ಯಲ್ಲಪ್ಪ ರಾಯದುರ್ಗ, ನಿಂಗಪ್ಪ ಟಣಮನಕಲ್, ಚಾಂದ್‌ಸಾಬ, ಶರಣೋಜಿ ಪವಾರ ಇತರರಿದ್ದರು. 
ಜಿಲ್ಲೆ

ಸರ್ಕಾರ ಖರೀದಿ ಕೇಂದ್ರ ಆರಂಭಿಸಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಭತ್ತ, ಹತ್ತಿ, ಸಜ್ಜೆ, ಮೆಕ್ಕೆಜೋಳ, ತೊಗರಿ ಹಾಗೂ ಇತರೆ ಬೆಳೆಗಳ ಬೆಲೆ ಕುಸಿದಿದ್ದು, ಶೀಘ್ರ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ನ್ಯೂ ಕರ್ನಾಟಕ ರೈತಸಂಘ ಮತ್ತು ಸಿಪಿಐ (ಎಂಎಲ್) ಸಂಘಟನೆಗಳ ನೇತೃತ್ವದಲ್ಲಿ ರೈತರು ಶನಿವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.

ನಾರಾಯಣಪುರ ಬಲದಂಡೆ ಮತ್ತು ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತದ ಕಟಾವು ಭರದಿಂದ ಸಾಗಿದೆ.

ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆದಿದ್ದಾರೆ. ಬೆಳೆಗಳ ಕಟಾವು ಮಾಡಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಬಳಿಕ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಪ್ರಯೋಜನವಾಗದು. ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದರು.