ವಿಜಯ ಕುಮಾರ ಸೋನಾರ 
ಜಿಲ್ಲೆ

ಸರ್ಕಾರ ಕ.ಕ. ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಲಿ

Gangavati - Desk - Veeresh S Ullagaddi

ಮಸ್ಕಿ:ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಬೇಕು ಎಂದು ಕಲ್ಯಾಣ ಕರ್ನಾಟಕ ಒಕ್ಕೂಟದ ಅಧ್ಯಕ್ಷ ವಿಜಯ ಕುಮಾರ ಸೋನಾರ ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಈ ಭಾಗದ ಕಲಾವಿದರ ಹಿತಕ್ಕಾಗಿ ಕಲ್ಯಾಣ ಕರ್ನಾಟಕ ಒಕ್ಕೂಟ ಆರಂಭವಾಗಿ ಎರಡು ವರ್ಷ ಕಳೆಯುತ್ತಿದೆ.

ಈ ಹಿಂದೆ ಕಲಾವಿದರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೆ ಸರ್ಕಾರ ಸ್ಪಂದಿಸಲಿಲ್ಲ. ಈಗಿನ ಸರ್ಕಾರ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸವಿದೆ. ರಾಜ್ಯ ಬೇರೆ ಕಡೆ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಲಾಗಿದೆ ಎಂದರು.


ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್.ಅಂಗಡಿ ಮಾತನಾಡಿ, ಕಲಾವಿದರ 10 ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಸರ್ಕಾರ ಕೊಪ್ಪಳದಲ್ಲಿ ಹಂಪಿ ಉತ್ಸವ ಮಾದರಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಅಮರೇಶ ಹಸಮಕಲ್, ನಾರಾಯಣಪ್ಪ, ಚಿನ್ನಪ್ಪ ಇದ್ದರು.