ಜಿಲ್ಲೆ

ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಕೊಡುಗೆ

Mangaluru - Nishantha Narayana

ಪುತ್ತೂರು: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ಮಹತ್ವವನ್ನು ಅರಿತ ಇನೋಸಿಸ್ ಸಂಸ್ಥೆಯ ಪ್ರೇರಣಾ ಟ್ರಸ್ಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ.

ಅನೇಸ್ತೇಷಿಯಾ ವರ್ಕ್ ಸ್ಟೇಷನ್, ಅಲ್ಟ್ರಾಸೌಂಡ್ ಯಂತ್ರ, ಸಿ-ಆರ್ಮ್ ಯಂತ್ರ, ಇ.ಟಿ.ಒ ಸ್ಟೆರಿಲೈಸರ್ ಯಂತ್ರ, ಸ್ಲಿಟ್ ಲ್ಯಾಂಪ್ ಯಂತ್ರಗಳನ್ನು ಕೊಡುಗೆ ನೀಡಿದ್ದು, ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗ, ಸ್ಕ್ಯಾನಿಂಗ್ ವಿಭಾಗ, ಕಣ್ಣು ತಪಾಸಣಾ ವಿಭಾಗ, ತುರ್ತು ಚಿಕಿತ್ಸಾ ಸೇವೆ ಮತ್ತು ಸೋಂಕು ನಿಯಂತ್ರಣದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ.

ಇನೋಸಿಸ್ ಪ್ರೇರಣಾ ಟ್ರಸ್ಟ್ ತಂಡದ ಸದಸ್ಯರಾದ ವಾಸುದೇವ ಕಾಮತ್, ರವಿರಾಜ್ ಬಲ್ಮಾ, ಸಂದೀಪ್ ಮತ್ತು ಆರನ್ ಡಿ’ಸಿಲ್ವಾ ಆಸ್ಪತ್ರೆಗೆ ಭೇಟಿ ನೀಡಿ, ಉಪಕರಣಗಳ ಅಳವಡಿಕೆ ಹಾಗೂ ಕಾರ್ಯನಿರ್ವಹಣೆ ಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಡಾ.ದೀಪಿಕಾ ವಾಗ್ಲೆ, ಇನೋಸಿಸ್‌ನ ಪ್ರಮೋದ್, ಅಪರ್ಣಾ ಭಟ್ ಉಪಸ್ಥಿತರಿದ್ದರು.

ಇನೋಸಿಸ್ ಪ್ರೇರಣಾ ಟ್ರಸ್ಟ್ ನೀಡಿರುವ ಉಪಕರಣಗಳು ಆಸ್ಪತ್ರೆಯ ವೈದ್ಯಕೀಯ ಸೌಲಭ್ಯವನ್ನು ಬಲಪಡಿಸುತ್ತವೆ. ಇವು ನಮ್ಮ ಆರೋಗ್ಯ ಸೇವೆಗಳಲ್ಲಿ ಗುಣಮಟ್ಟ ಹೆಚ್ಚಿಸಿ, ಜನತೆಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗಲಿದೆ.

| ಡಾ.ಆಶಾಜ್ಯೋತಿ ಕೆ.

ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ