ಜಿಲ್ಲೆ

ಸರ್ಕಾರಕ್ಕೆ ಡಿಸಿಎಂ ಮೇಲೆ ನಂಬಿಕೆ ಇಲ್ಲ, ಯಾರಿಂದಲಾದರೂ ತನಿಖೆ ಮಾಡಿಸಿಕೊಳ್ಳಿ

ಚಿಕ್ಕಬಳ್ಳಾಪುರ: ಕರೊನಾ ನಿರ್ವಹಣೆಯ ತನಿಖೆಯನ್ನು ಯಾವ ಸಂಸ್ಥೆಗಾದರೂ ವಹಿಸಲಿ ಎಂದು ಸಂಸದ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಹಗರಣದ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ. ಇದು, ರಾಜ್ಯ ಸರ್ಕಾರದ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರ, ಅವ್ಯವಹಾರಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುವ ಹುನ್ನಾರ ಅಷ್ಟೇ ಎಂದರು.

ಮೊದಲು ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ೭ ಪ್ರಭಾವಿ ಸಚಿವರನ್ನೊಳಗೊಂಡ ಉಪ ಸಂಪುಟ ಸಮಿತಿಯ ಮೇಲೆ ನಂಬಿಕೆ ಇಲ್ಲದೇ ಕರೊನಾ ಹಗರಣ ತನಿಖೆಯ ಹೊಣೆಯನ್ನು ಎಸ್‌ಐಟಿಗೆ ಒಪ್ಪಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಮುಖಂಡ ಆವಲಗುರ್ಕಿ ರಾಜಣ್ಣ ಮತ್ತಿತರರು ಇದ್ದರು.

*ನೀರಿನ ಘಟಕ ಉದ್ಘಾಟನೆ

ಗ್ರಾಮದಲ್ಲಿನ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಸಂಸದರು ಭೇಟಿ ನೀಡಿದರು. ನೂತನ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಾಗೆಯೇ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿರುವ ನೂತನ 'ಅಮೃತಗಂಗೆ' ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.